ಉಡುಪಿ: 2021-22 ನೇ ಶೈಕ್ಷಣಿಕ ಸಾಲಿನ ಪಬ್ಲಿಕ್ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಉಡುಪಿ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿಯರು

ಸದರಿ ವರ್ಷದ ಎಸ್.ಎಸ್.ಎಲ್.ಸಿ ತರಗತಿಯ 125 ಜನ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, 116 ಜನಉತ್ತೀರ್ಣರಾಗಿ 93% ಫಲಿತಾಂಶ ಪ್ರಾಪ್ತವಾಗಿರುತ್ತದೆ. ಇವರಲ್ಲಿ 28 ಜನಎ+ ಗ್ರೇಡ್, 43 ಜನ ಎ ಗ್ರೇಡ್, 28 ಜನ ಬಿ+ ಗ್ರೇಡ್, 16 ಜನ ಬಿ ಗ್ರೇಡ್, 1 ವಿದ್ಯಾರ್ಥಿನಿ ಸಿ+ ಗ್ರೇಡ್ ಪಡೆದಿರುತ್ತಾರೆ.

ಒಟ್ಟಾರೆ 48 ಜನ ವಿದ್ಯಾರ್ಥಿನಿಯರು ವಿಶಿಷ್ಟಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಶಾಲೆ ಈ ವರ್ಷ 87.67 ಗುಣಾತ್ಮಕ ಅಂಕಗಳನ್ನು ಗಳಿಸಿ ಎ ಗ್ರೇಡ್ ನ್ನು ಗಳಿಸಿದೆ.