ಕಿನ್ನಿಗೋಳಿ: ಬಡಕರೆ ಬಾಳಿಕೆ ಗೋಪಾಲ ಶೆಟ್ಟಿಯಾಲ್ (92) ಅವರು 23-3-2023 ಗುರುವಾರದಂದು ನಿಧನರಾದರು.  ಸರಿ ಸುಮಾರು ಐವತ್ತೈದು ವರ್ಷಗಳಿಗಿಂತಲೂ ಅಧಿಕ ವರ್ಷದಿಂದ ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನ ಹಾಗೂ  ಬಡಕರೆ ಶ್ರೀ ಜಾರಂದಾಯ ದೈವಸ್ಥಾನದ ಮೊಕ್ತೇಸರರಾಗಿ ನಿಷ್ಠೆಯ ಸೇವೆ ಸಲ್ಲಿಸಿದ ಮಹನೀಯರಾಗಿದ್ದು, ಋಷಿ ಸಂಸ್ಕೃತಿ ಕೃಷಿ ಬದುಕಿನಲ್ಲಿ ತಮ್ಮ ಜೀವನವನ್ನು ಮುನ್ನಡೆಸಿದ್ದರು. 

ದೈವಗಳ ಕಟ್ಟುಕಟ್ಟಲೆ ಆಚಾರ ವಿಚಾರಗಳ ಬಗ್ಗೆ ಅಪರಿಮಿತ ಜ್ಞಾನವನ್ನು ಹೊಂದಿದ್ದ ಇವರ ಮುಂದಾಳತ್ವದಲ್ಲಿ  ಬಡಕರೆ ಜಾರಂದಾಯ ದೈವಸ್ಥಾನದಲ್ಲಿ ನಾಲ್ಕು ಬ್ರಹ್ಮಕಲಶಗಳು ನಡೆದು ಕ್ಷೇತ್ರ ಬಹಳಷ್ಟು ಜೀರ್ಣೋದ್ದಾರ ಕಾರ್ಯಗಳನ್ನು ಕಂಡು ಕೊಂಡಿರುವುದು ಉಲ್ಲೇಖನೀಯ. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.