ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸತತವಾಗಿ ಸುರಿಯುವ ಮಳೆಯಿಂದ ನಗರದ ಉರ್ವ ಸುಂಕದಕಟ್ಟೆಯ ಬಳಿ ಮನೆ ಕುಸಿದು ಬಿದ್ದಿದ್ದು, ಮನೆ ಸಂಪೂರ್ಣವಾಗಿ ನಾಶಗೊಂಡಿದ್ದು, ಅಪಾಯದ ಪರಿಸ್ಥಿತಿಯಲ್ಲಿ ಇರುವುದರಿಂದ ನಗರಪಾಲಿಕೆಯ ವತಿಯಿಂದ ಅರ್ಧ ಕುಸಿತಗೊಳಗಾಗಿ, ಮುಂದೆ ಸದ್ರಿ ಮನೆಯು ನೆರೆಯ ಮನೆಯ ಮೇಲೆ ಬೀಳುವ ಪರಿಸ್ಥಿತಿಯಲ್ಲಿರುದರಿಂದ ಅರ್ಧ ಕುಸಿತಗೊಳಗಾದ ಮನೆಯನ್ನು ಕೂಡಲೇ ಸಂಪೂರ್ಣವಾಗಿ ತೆರವುಗೊಳಿಸಿ, ಇತರ ಮನೆಗಳಿಗಾಗುವ ಅಪಾಯವನ್ನು ತಪ್ಪಿಸಲು ಕೈಗೊಳ್ಳಬೇಕೆಂದು ಸ್ಥಳದಿಂದಲೇ ನಗರಪಾಲಿಕೆ ಆಯುಕ್ತರಿಗೆ ಫೆÇೀನ್ ಮೂಲಕ ಸಂಪರ್ಕಿಸಿ, ಅಪಾಯ ತಪ್ಪಿಸುವಂತೆ ಸೂಚಿಸಿದರು ಮತ್ತು ಸರಕಾರದ ವತಿಯಿಂದ ಕೊಡಲ್ಪಡುವ ರೂ.5ಲಕ್ಷ ಪರಿಹಾರ ಹಣವನ್ನು ಮಂಜೂರಾತಿ ನೀಡಲು  ಹಾಗೂ ಮನೆ ಪುನರ್ ನಿರ್ಮಾಣ ಮಾಡಲು ಒತ್ತಾಯಿಸಿದರು. ಸದ್ರಿ ಮನೆಮಂದಿಗಳು ಬೇರೆ ಸ್ಥಳಕ್ಕೆ ಈಗಾಗಲೇ ಸ್ಥಳಾಂತರ ಗೊಂಡಿದ್ದು, ತುರ್ತು ಪರಿಹಾರವನ್ನು ಇಲಾಖಾವತಿಯಿಂದ ನೀಡಬೇಕೆಂದು ಮಾಜಿ ಶಾಸಕರಾದ ಐವನ್ ಡಿ ಸೋಜ ಇವರ ವತಿಯಿಂದ ದಿನಸಿ ಸಾಮಾಗ್ರಿಗಳನ್ನು ಸಂತ್ರಸ್ತ ಕುಟುಂಬದವರಿಗೆ ವಿತರಿಸಿದರು.  

ಈ ಸಂದರ್ಭದಲ್ಲಿ  ಸದ್ರಿ ವಾರ್ಡಿನ ಬೂತ್ ಅಧ್ಯಕ್ಷರಾದ ತಮ್ಮಣ್ಣ, ಯುವ ನಾಯಕ ಚೇತನ್ ಕುಮಾರ್ ಉರ್ವ, ಮಹಿಳಾ ಕಾಂಗ್ರೆಸ್ ನಾಯಕಿ ರೂಪಚೇತನ್, ಸಂತೋಷ್, ರವಿಕುಮಾರ್, ಕಾಂಗ್ರೆಸಿಗರಾದ ಪದ್ಮ ಸುಂಕದಕಟ್ಟೆ ಮುಂತಾದವರು  ಉಪಸ್ಥಿತರಿದ್ದರು.