ಪ್ರಧಾನಿ ಇಮ್ರಾನ್ ಖಾನ್ ಸಲಹೆಯ ಮೇಲೆ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಆಲಿಯವರು ಪಾಕಿಸ್ತಾನದ ರಾಷ್ಟ್ರೀಯ ಎಸೆಂಬ್ಲಿಯನ್ನು ವಿಸರ್ಜಿಸಿದರು.

ಸಂಸತ್ತಿನಲ್ಲಿ ಉಪ ಸ್ಪೀಕರ್ ಕಾಸಿಂ ಸೂರಿಯವರು ಅವಿಶ್ವಾಸ ನಿರ್ಣಯ ಮಂಡನೆಯು ಸಂವಿಧಾನದ 5ನೇ ವಿಧಿಯನ್ನು ಉಲ್ಲಂಘನೆ ಮಾಡಿದೆ ಎಂದು ಅದನ್ನು ವಜಾ ಮಾಡಿದರು.

ನಮ್ಮಲ್ಲಿ ಸಂಖ್ಯಾಬಲ ಇತ್ತು. ಇದು ಅಸಾಂವಿಧಾನಿಕ‌ ಎಂದು ಪ್ರತಿಪಕ್ಷಗಳವರು ಹೇಳಿದ್ದಾರೆ. ಈ ನಡುವೆ ಇಮ್ರಾನ್ ಖಾನ್ ಅವರು ಕೂಡಲೆ ಚುನಾವಣೆಗೆ ಕರೆ ನೀಡಿದ್ದಾರೆ.