ಕರ್ನಾಟಕದಲ್ಲಿ ನಡೆಯುವ ಚುನಾವಣೆಯ ಕುರಿತು ನಡೆಸಿದ ಸಮೀಕ್ಷೆಯ ಪ್ರಕಾರ  ಈ ಬಾರಿ ಕಾಂಗ್ರೆಸ್  ಮೇಲುಗೈ ಸಾಧಿಸುವುದು.

ರಾಜ್ಯದ ವಿವಿಧ ಏಜೆನ್ಸಿ ಮೂಲಕ ನಡೆಸಿದ ಸರ್ವೇಯಲ್ಲಿ  ಬಡವರ್ಗದ ಜನರು, ಕೆಳ ಮಧ್ಯಮ ವರ್ಗದ ಜನ ಬೆಲೆ ಏರಿಕೆಯ ವಿರುದ್ಧ ಮತ ಚಲಾಯಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಧ್ಯಮ ವರ್ಗದ ಹಾಗೂ ಶ್ರೀಮಂತವರ್ಗದ ಒಂದು ಭಾಗ ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಹಿಂದುತ್ವ ಆಧಾರಿತ ಮತದಾರರು ಕರಾವಳಿ ಮಲೆನಾಡು ಭಾಗದಲ್ಲಿ ಈ ಬಾರಿ ಗೊಂದಲದಿಲ್ಲರುವುದು ವ್ಯಕ್ತವಾಗಿದೆ.  ಮುತಾಲಿಕ್ ಮತ್ತು ಅರುಣ ಪುತ್ತಿಲ ಅವರ ಮೇಲೆ ಬಿಜೆಪಿ ನಡೆಸಿದ ವಾಗ್ಧಾಳಿಯಿಂದಾಗಿ ಬಿಜೆಪಿ ಹಿಂದುತ್ವದ ಬಗ್ಗೆ ಒಂದಿಷ್ಟು ಮತದಾರರು ಮುನಿಸಿಕೊಂಡಿದ್ದಾರೆ.

ಇನ್ನು ಮೋದಿ ಶಾ ಹಾಗೂ ಯೋಗಿಯವರ ಭೇಟಿ. ಇವರ ಕಾರ್ಯಕ್ರಮದಲ್ಲ ಬಿಜೆಪಿಗರೇ  ಸೇರುತ್ತಿದ್ದಾರೆ ಹೊರತು ಹೊಸ ಮತದಾರರು ಆಕರ್ಷಿಸುವಲ್ಲಿ ವಿಫಲರಾಗಿದ್ದಾರೆ. ಮೋದಿ ಮೇನಿಯಾ ಮೊದಲನಂತಿರುವುದಿಲ್ಲ.

ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ಕಾಂಗ್ರೆಸ್ ಗೆ ಸ್ವಲ್ಪ ಲಾಭ ತರಲಿದೆ.

ಇನ್ನು ಕೆಲವು ಕ್ಷೇತ್ರದಲ್ಲಿ ಬಿಜೆಪಿಯ ಪ್ರಬಲ ಅಬ್ಯರ್ಥಿಗಳಿಂದಾಗಿ, ಕಾಂಗ್ರೆಸ್ ಒಳಜಗಳ ಲಾಭವಾಗಿ, ಮತ್ತು ಜಾತಿ ಲೆಕ್ಕಾಚಾರದಲ್ಲಿ ಬಿಜೆಪಿಗೆ ಒಂದಿಷ್ಟು ಲಾಭವಾಗಲಿದೆ. ಅಮಿತ್ ಶಾ ಯೋಗಿಯವರಿಂದ ಲಾಭವಾಗದಿದ್ದರೂ ಮೋದಿಯವರಿಂದ ಒಂದೆರಡು ಕಡೆ ಬಿಜೆಪಿಗೆ ಲಾಭವಾದೀತು.

ಕರಾವಳಿಯಲ್ಲಿ ಜನ ಬಿಜೆಪಿಗೆ ವಿರುದ್ಧವಾಗಲು ಮತ್ತೊಂದು ಕಾರಣ ಸಿಡಿ ಪ್ರಕರಣ ಮತ್ತು ಸ್ಟೇ ಪ್ರಕರಣ. ಹಾಗಾಗಿ ಕರಾವಳಿಯಲ್ಲೂ ಕಾಂಗ್ರೆಸ್ ಗೆ ಸೀಟು ಹೆಚ್ಚಳವಾಗುವ ಸಾಧ್ಯತೆ ಇದೆ.

ಕಾಂಗ್ರೆಸ್ - 118 ರಿಂದ 135

ಬಿಜೆಪಿ- 65 ರಿಂದ 75

ದಳ - 20 ರಿಂದ 26

ಇತರ - 5