ಸಂಸ್ಕೃತಿಯ ಹೆಸರಿನಲ್ಲಿ ಸಂಸ್ಕೃತಿಯನ್ನು ಹೇಸಿಗೆ ಮಾಡುವವರು ಈ ಬಿಜೆಪಿಯವರು. ಮೋದಿಯವರ ಭೇಟಿ ಬಚಾವೊ ಮಕಾಡೆ ಮಲಗಿದೆ ಎಂದು ಮಾಜೀ ಭಾರಚಕ್ರ ಎಸೆತದ ಆಟಗಾತಿ, ಕಾಂಗ್ರೆಸ್ ನಾಯಕಿ ಕೃಷ್ಣಾ ಪೂನಿಯಾ ಹೇಳಿದರು.

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಲೈಂಗಿಕ ಕಿರುಕುಳದ ಆರೋಪಿ. ಆತನನ್ನು ಆಲಂಗಿಸಿಕೊಂಡೇ ಇವರ ತನಿಖೆ ದೊಡ್ಡ ನಾಟಕ. ಮೋದಿಯವರ ಭೇಟಿ ಬಚಾವೊ ಬಯಲಾಗಿದೆ ಎಂದು  ಕಾಂಗ್ರೆಸ್ ನಾಯಕಿ ಕೃಷ್ಣಾ ಪೂನಿಯಾ ಹೇಳಿದರು. ಧರಣಿ ಕುಳಿತಿರುವ ಕುಸ್ತಿ ಪಟುಗಳಿಗೆ ಬೆಂಬಲ ಸೂಚಿಸಿದರು.

ಕುಸ್ತಿ ವೀರರ ಪ್ರತಿಭಟನೆಯು ನಾಲ್ಕನೆಯ ದಿನಕ್ಕೆ ಕಾಲಿಟ್ಟಿತು. ನಿನ್ನೆ ಪ್ರತಿಭಟನಾ ಸ್ಥಳದಲ್ಲಿ ಯಾವ ಪಕ್ಷದ ರಾಜಕೀಯ ನಾಯಕರು ಕೂರಬಾರದು ಎಂದು ಅಲ್ಲಿದ್ದ ಕಮ್ಯೂನಿಸ್ಟ್‌ ನಾಯಕರನ್ನು ಎಬ್ಬಿಸಿದರು.

ಭಾರತೀಯ ಒಲಿಂಪಿಕ್ಸ್ ಎಸೋಸಿಯೇಶನ್ ಈ ಪ್ರಕರಣದ ತನಿಖೆಗೆ 7 ಜನರ ಸಮಿತಿಯೊಂದನ್ನು ರಚಿಸಿದೆ. ಕ್ರೀಡಾ ಮಂತ್ರಿ ಅನುರಾಗ್ ಠಾಕೂರ್ ಮತ್ತೊಂದು ಸುತ್ತು ಮಾತುಕತೆ ನಡೆಸಿದರು. ಆದರೆ ಆರೋಪಿ ಬಿಜೆಪಿ ಸಂಸದನನ್ನು ಕೈಬಿಡಲು ಒಪ್ಪದ್ದರಿಂದ ಮಾತುಕತೆ ವಿಫಲವಾಯಿತು.