ಮೂಡುಬಿದ್ರೆ : ಸ್ಥಳೀಯ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಂಡೇಲು ಇಲ್ಲಿಯ ಎಲ್ಲ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕವನ್ನು ಉಚಿತವಾಗಿ ಕಲ್ಲಬೆಟ್ಟು ವನಜಾಕ್ಷಿ ಚಾರಿ ಟೇಬಲ್ ಟ್ರಸ್ಟ್ ನವರು ಒದಗಿಸಿ ಕೊಟ್ಟರು. ಇದರ ವಿತರಣಾ ಸಮಾರಂಭ ಜೂನ್ ಹತ್ತರಂದು ಶಾಲೆಯಲ್ಲಿ ನಡೆಯಿತು.


ಮೂಡುಬಿದಿರೆ ಲಯನ್ಸ್ ಕ್ಲಬ್ ನವರ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಪುಸ್ತಕ ವಿತರಿಸಿದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಸ್ಥಳೀಯ ಧನಲಕ್ಷ್ಮಿ ಗೇರು ಬೀಜ ಉದ್ಯಮದ ಮಾಲಕ ಲಯನ್ ಶ್ರೀಪತಿ ಭಟ್ ರವರು ಮಾತನಾಡಿ ವಿದ್ಯಾ ದಾನಕ್ಕೆ ಸಹಾಯ ಮಾಡುವುದು ಭಗವತ್ ಆರಾಧನೆಗೆ ಸಮ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆಲ್ಲರೂ ಉತ್ತಮ ವಿದ್ಯೆಯನ್ನು ಪಡೆದರೆ ದೇಶ ಹಾಗೂ ಸಮಾಜ ಅಭಿವೃದ್ಧಿಯಾಗಿ ಜನರ ಬಾಳು ಬೆಳಗಲು ಸಾಧ್ಯವಿದೆ ಎಂದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಂಡೇಲು ಗುತ್ತು ಧನ ಕೀರ್ತಿ ಬಲಿಪ ಮಾತನಾಡಿ 78 ವರ್ಷದ ಈ ಶಾಲೆಯಲ್ಲಿ ಉತ್ತಮ ಕಾರ್ಯ ಕೈಗೊಳ್ಳಲು ನಾವೆಲ್ಲ ಪ್ರಯತ್ನಿಸುತ್ತೇವೆ ಎನ್ನುವ ಭರವಸೆಯನ್ನು ವ್ಯಕ್ತಪಡಿಸಿದರು. ಅದೇ ರೀತಿ ಹೆತ್ತವರು ಹೆಚ್ಚಿನ ಅಸ್ಥೆಯಿಂದ ಮನೆಯ ಹತ್ತಿರದ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಪ್ರೇರೇಪಿಸಿ ಪ್ರಯತ್ನಿಸಬೇಕೆಂದು ಕೇಳಿಕೊಂಡರು.
ವೇದಿಕೆಯಲ್ಲಿ ಲಯನ್ ವಲಯ್ಯಾಧ್ಯಕ್ಷ ಎಂ ಕೆ ದಿನೇಶ್, ನಿಯೋಜಿತ ಅಧ್ಯಕ್ಷ ಬೋನವಂಚರ್, ಕಾರ್ಯದರ್ಶಿ ಹೋಸ್ ವಾಲ್ಡ್ ಡಿಕೋಸ್ಟ, ಗ್ರಾಮ ಪಂಚಾಯತ್ ಸದಸ್ಯ ಮುರಳಿಧರ, ಹಳೆ ವಿದ್ಯಾರ್ಥಿ ಸಂಘದ ಖಜಾಂಚಿ ಜಯಂತ ಪೂಜಾರಿ ಹಾಜರಿದ್ದರು. ಮುಖ್ಯ ಶಿಕ್ಷಕಿ ಚಂದ್ರಕಾಂತಿ ಸ್ವಾಗತಿಸಿದರು. ಡಾಕ್ಟರ್ ದೊರೆಸ್ವಾಮಿ ಕೆ ಎನ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಚಿತ್ರ ವರದಿ ರಾಯಿ ರಾಜಕುಮಾರ್ ಮೂಡುಬಿದಿರೆ