ಮಂಗಳೂರು: ಇದು ತಂತ್ರಜ್ಞಾನದ ಯುಗ. ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನದಿಂದಾಗಿ ಮನುಷ್ಯನ ಬಹುತೇಕ ಕೆಲಸಗಳು ಸಲೀಸಾಗಿವೆ. ಆದರೂ ನಮ್ಮಲ್ಲಿ ಈಗ ಸಮಯ ಇಲ್ಲ ಎನ್ನುವ ಮಾತು ಆಶ್ಚರ್ಯತರಿಸುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಕೌಟುಂಬಿಕ ಮೌಲ್ಯಗಳು ಮಾಯವಾಗುತ್ತಿದೆ ಎಂದು ಎಂಆರ್ಪಿಎ ಲ್ನ ಒ ಎನ್ಜಿಸಿ ಮಂಗಳೂರು ಇದರ ಮುಖ್ಯ ಪ್ರಬಂಧಕ (ರಾಜ ಭಾಷಾ ವಿಭಾಗ) ಡಾ. ಬಿ. ಆರ್. ಪಾಲ್ ವಿಷಾದ ವ್ಯಕ್ತಪಡಿಸಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಮತ್ತು ವಿಶ್ವ ಹಿಂದಿ ಸಾಹಿತ್ಯ ಸೇವಾ ಸಂಸ್ಥಾನ, ಪ್ರಯಾಗ್‍ರಾಜ್ ಇದರ ಸಂಯುಕ್ತ ಆಶ್ರಯದಲ್ಲಿ 'ಹಿಂದಿ ಸಾಹಿತ್ಯದಲ್ಲಿ ವೃದ್ಧ ವಿಮರ್ಶೆ' ವಿಷಯದ ಕುರಿತುಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ವಿಶ್ವ ಹಿಂದಿ ಸಾಹಿತ್ಯ ಸೇವಾ ಸಂಸ್ಥಾನದ ಕಾರ್ಯಾಧ್ಯಕ್ಷ ಓಂ ಪ್ರಕಾಶ್ ತ್ರಿಪಾಠಿ, ಪ್ರಸ್ತುತ ಸನ್ನಿವೇಶದಲ್ಲಿ ವೃದ್ಧಾ ವಿಮರ್ಶೆಎನ್ನುವುದು ಅತಿ ಅವಶ್ಯಕವಾಗಿದೆ. ಈ ಕುರಿತು ಒಂದಷ್ಟು ವಿಚಾರ ಮಂಥನ ನಡೆಯಬೇಕಿದೆ. ಈ ನಿಟ್ಟಿನಲ್ಲಿ ವಿಚಾರ ಸಂಕಿರಣ ಹೆಚ್ಚು ಪ್ರಾಮುಖ್ಯತೆಯನು ಪಡೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿಗೌಡ, ಎರಡು ದಿನಗಳ ಕಾಲ ಯಶಸ್ವಿಯಾಗಿ ಕಾರ್ಯಕ್ರಮ ನಡೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದಿ ಸಾಹಿತ್ಯ ಸೇವಾ ಸಂಸ್ಥಾನದ ಸದಸ್ಯಡಾ. ಗೋಕುಲೇಶ್ವರ್‍ಕುಮಾರ್ ದ್ವಿವೇದಿ, ವಿಶ್ವವಿದ್ಯಾನಿಲಯ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸುಮ ಟಿ. ಆರ್., ಹಿಂದಿ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ನಾಗರತ್ನರಾವ್, ಐಕ್ಯೂಎಸಿ ಸಂಯೋಜಕ ಡಾ. ಸಿದ್ದರಾಜು ಎಂ. ಎನ್., ಸಂಸದೀಯ ಸಲಹಾ ಸಮಿತಿಕೋಲ್ ಮಂತ್ರಾಲಯದ ಸದಸ್ಯಡಾ. ಪ್ರೇಮ್ ತನ್ಮಯ್, ಬ್ಯಾಂಕ್‍ಆಫ್ ಬರೋಡಾದ ಅಧಿಕಾರಿ ಅಶ್ವಿನ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.