2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಖಂಡಿತ ಸೋಲಿಸುವುದು ಸಾಧ್ಯ. ಆದರೆ ಅದಕ್ಕೆ ಪ್ರತಿ ಪಕ್ಷಗಳು ಸರಿಯಾದ ಮೈತ್ರಿ ಕೂಟ ರಚಿಸಬೇಕು ಎಂದು ಚುನಾವಣಾ ತಜ್ಞ ಎನ್ನಲಾದ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಬಿಹಾರದಲ್ಲಿ ಆರ್‌ಜೆಡಿ ನೇತೃತ್ವದಲ್ಲಿ ಆದ ಮೈತ್ರಿ ಉಳಿಯಲಿಲ್ಲ. ಬಿಜೆಪಿ ಸೋಲಿಸಲು ಅಂತಾ ಒಂದು ಮೈತ್ರಿಯ ಅಗತ್ಯವಿದೆ. ಈಗ ಐದು ರಾಜ್ಯಗಳ ಚುನಾವಣೆಗಳಲ್ಲಿ ಇರುವ ಕೆಲವು ಮೈತ್ರಿಗಳು ದೂರ ದೃಷ್ಟಿಯವಲ್ಲ. ಬಿಜೆಪಿ ಮಣಿಸಲು ಹತ್ತಾರು ವರುಷ ಉಳಿಯಬಲ್ಲ ದೂರಗಾಮಿ ಮೈತ್ರಿ ಬೇಕು. ಅದು ಸಾಧ್ಯವಾದರೆ ಬಿಜೆಪಿ ‌ವಿರೋಧಿ ಮೈತ್ರಿ ಕೂಟವು 300ರಷ್ಟು ಕಡೆ ಗೆಲ್ಲಲು ಸಾಧ್ಯವಿದೆ ಎಂದು ಅವರು ಹೇಳಿದರು.