ವಿಶ್ವಾಸ, ಶುದ್ಧತೆ ಮತ್ತು ಕರಕುಶಲತೆಗೆ ಹೆಸರುವಾಸಿಯಾದ ಬಿಂದು ಜ್ಯುವೆಲ್ಲರಿ, ಮಂಗಳೂರಿನ ಬೆಂದೂರಿನಲ್ಲಿ ತನ್ನ ಭವ್ಯವಾದ ಹೊಸ ಶೋರೂಮ್ ಅನ್ನು ಅನಾವರಣಗೊಳಿಸುವ ಮೂಲಕ ನಾಲ್ಕು ಅದ್ಭುತ ದಶಕಗಳ ಶ್ರೇಷ್ಠತೆಯನ್ನು ಹೆಮ್ಮೆಯಿಂದ ಆಚರಿಸುತ್ತದೆ. ಈ ಸಂದರ್ಭದಲ್ಲಿ ಭವ್ಯವಾದ ಹೊಸ ಶೋರೂಮನ್ನು ತೆರೆಯುವುದಲ್ಲದೆ, ಸೌಂದರ್ಯ ಮತ್ತು ಸಮಗ್ರತೆ ಎರಡನ್ನೂ ಪ್ರತಿಬಿಂಬಿಸುವ ಆಭರಣಗಳನ್ನು ರಚಿಸುವ ಕನಸು ಕಂಡಿದ್ದ ಆಭರಣ ಕುಶಲಕರ್ಮಿಯಾಗಿದ್ದ ಇದರ ಸಂಸ್ಥಾಪಕರಾದ ದಿವಂಗತ ಕೆ.ವಿ. ಕುಂಣಿಕಣ್ಣನ್ ಅವರ ದೂರದೃಷ್ಟಿಯಡಿಯಲ್ಲಿ ಪ್ರಾರಂಭಗೊಂಡ ಸುವರ್ಣ ಪ್ರಯಾಣವನ್ನು ಪ್ರತಿಬಿಂಬಿಸುವುದು. ಕಾಸರಗೋಡಿನಲ್ಲಿ ಪ್ರಾಮಾಣಿಕ ಆಭರಣ ಕುಶಲಕರ್ಮಿಗಳ ಕಾರ್ಯಾಗಾರವಾಗಿ ಪ್ರಾರಂಭಗೊಂಡ ಸಂಸ್ಥೆ, ಈಗ ಕೇರಳ ಮತ್ತು ಕರ್ನಾಟಕದ ಅತ್ಯಂತ ಗೌರವಾನ್ವಿತ ಆಭರಣ ಬ್ಯಾಂಡ್‌ಗಳಲ್ಲಿ ಒಂದಾಗಿದೆ ಮತ್ತು ಶುದ್ಧತೆ, ಗ್ರಾಹಕರ ನಂಬಿಕೆ ಮತ್ತು ವಿನ್ಯಾಸ ನಾವೀನ್ಯತೆಗೆ ಹೆಸರುವಾಸಿಯಾಗಿದೆ.
ಈ ಅಸಾಧಾರಣ ಪರಂಪರೆಯನ್ನು ಹೆಮ್ಮೆ ಮತ್ತು ಉತ್ಸಾಹದಿಂದ ಮುಂದುವರಿಸಿಕೊಂಡು ಹೋಗುತ್ತಿರುವವರು ಅವರ ಪುತ್ರರಾದ ಅಭಿಲಾಷ್ ಕೆ.ವಿ ಮತ್ತು ಡಾ. ಅಜಿತೇಶ್ ಕೆ.ವಿ. ಅವರ ಸಮರ್ಥ ನಾಯಕತ್ವವು ಬಿಂದು ಜ್ಯುವೆಲ್ಲರಿಗೆ ಸಾಂಪ್ರದಾಯಿಕ ಶೈಲಿಯ ಜೊತೆಗೆ ಆಧುನಿಕತೆಯನ್ನು ಬೆರೆಸುವ ನವೀಕೃತ ಗುರುತನ್ನು ನೀಡಿದೆ. ಒಟ್ಟಾಗಿ, ಅವರು ಬ್ಯಾಂಡ್ ಅನ್ನು ಕಲಾತ್ಮಕತೆ ಮತ್ತು ಅಚಲ ನಂಬಿಕೆಯ ಸಂಕೇತವಾಗಿ ಪರಿವರ್ತಿಸಿದ್ದಾರೆ.
ಬೆಂದೂರ್‌ನಲ್ಲಿನ ಹೊಸ ಪ್ರಮುಖ ಶೋರೂಮ್‌ನ್ನು ಗ್ರಾಹಕರಿಗೆ ಆಕರ್ಷಕ ಹಾಗೂ ಅದ್ಭುತ ಅನುಭವವನ್ನು ನೀಡುವಂತೆ ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಪ್ರತಿಯೊಂದು ಆಭರಣವೂ ಅದರ ಕೌಶಲ್ಯದ ಕಥೆಯನ್ನು ಹೇಳುತ್ತದೆ ಮತ್ತು ಪ್ರತಿಯೊಂದು ಹೊಳಪು ಪರಂಪರೆಯನ್ನು ಹೊಂದಿರುತ್ತದೆ. ಇಲ್ಲಿ ಗ್ರಾಹಕರು ಕೇವಲ ಖರೀದಿದಾರರಲ್ಲ ಅವರೂ ಬಿಂದು ಕುಟುಂಬದ ಅವಿಭಾಜ್ಯ ಸದಸ್ಯರು. ಗ್ರಾಹಕ ಪ್ರೀತಿ ವಿಶ್ವಾಸವೇ ಈ ಬ್ಯಾಂಡ್‌ನ ಅತ್ಯಮೂಲ್ಯ ಸಂಪತ್ತು. ಕಳೆದ 40 ವರ್ಷಗಳಿಂದ ಬಿಂದು ಜ್ಯುವೆಲ್ಲರಿ ತನ್ನ ಗ್ರಾಹಕರೊಂದಿಗೆ ಆಳವಾದ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿದ್ದು, ಅದು ತಲೆಮಾರುಗಳ ವರೆಗೆ ಮುಂದುವರಿದು ಪ್ರಾಮಾಣಿಕತೆ, ಸೇವೆ ಮತ್ತು ಸಂಭ್ರಮದ ಕ್ಷಣಗಳಲ್ಲಿ ಬೇರೂರಿದ ಸಂಬಂಧವಾಗಿದೆ. ಬಿಂದುಗೆ ಭೇಟಿ ನೀಡುವುದು ಕೇವಲ ಶಾಪಿಂಗ್ ಅನುಭವವಲ್ಲ ಅದು ದಶಕಗಳಿಂದ ಕಟ್ಟಿಕೊಂಡ ವಿಶ್ವಾಸದ ಮುಂದುವರಿಕೆಯಾಗಿದೆ.
ಬ್ಯಾಂಡ್ ಹೊಸ ಹೊಸ ಆಯಾಮಗಳನ್ನು ಅಳವಡಿಸಿಕೊಂಡರೂ, ಅದರ ಮೂಲ ನಂಬಿಕೆಯಾದ "ದಿ ಪ್ರಾಮಿಸ್ ಆಫ್ ಲೈಫ್ ಟೈಮ್” (ಜೀವಮಾನದ ಭರವಸೆ) ಎಂಬ ವಾಗ್ದಾನದ ಬದ್ಧತೆಯನ್ನು ಉಳಿಸಿಕೊಂಡಿದೆ. ಈ ವಾಗ್ದಾನವು ಬಿಂದು ಜ್ಯುವೆಲ್ಲರಿಯ ಶುದ್ಧತೆ, ಗುಣಮಟ್ಟ ಹಾಗೂ ಕಾಲವನ್ನು ಮೀರಿ ಮೌಲ್ಯವನ್ನು ಉಳಿಸಿಕೊಂಡಿರುವ ಆಭರಣ ತಯಾರಿಕೆಯ ಪ್ರತಿಬದ್ಧತೆಯನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ಆಭರಣವೂ ಕೇವಲ ಅಲಂಕಾರವಲ್ಲ, ಅದು ಪ್ರೀತಿ, ಸಂಭ್ರಮ ಮತ್ತು ಮೈಲಿಗಲ್ಲುಗಳ ಕಥೆಗಳನ್ನು ಹೊತ್ತಿರುವ ಜೀವನಪರ್ಯಂತದ ಸಂಗಾತಿ. ಹಾಲ್‌ಮಾರ್ಕ್ ಚಿನ್ನದ ಭರವಸೆ, ಅಚಲ ಗುಣಮಟ್ಟದ ಮಾನದಂಡಗಳು ಮತ್ತು ನೈತಿಕ ಕಲೆಯ ಮೂಲಕ ಈ ವಾಗ್ದಾನವನ್ನು ಬಿಂದು ಬಲಪಡಿಸುತ್ತದೆ. ಇದರಿಂದಾಗಿ ಪ್ರತಿಯೊಬ್ಬ ಗ್ರಾಹಕರೂ ಇಲ್ಲಿ ಆಭರಣಗಳೊಂದಿಗೆ ಭಾವನಾತ್ಮಕ ಸಂಬಂಧವನ್ನು ಜತೆಗೊಯ್ಯುತ್ತಾರೆ.
ಈ ವಿಶೇಷ ಸಂದರ್ಭದಲ್ಲಿ, ಬಿಂದು ಜ್ಯುವೆಲ್ಲರಿ ತನ್ನ ಮುಂದಿನ ವಿಸ್ತರಣೆಯನ್ನು ಹೆಮ್ಮೆಯಿಂದ ಘೋಷಿಸುತ್ತಿದೆ. ಮುಂದಿನ ಯೋಜನೆಗಳಲ್ಲಿ ಇಂದಿನ ಆಧುನಿಕ ಮತ್ತು ನಾವೀನ್ಯತೆಯನ್ನು ಬಯಸುವ ತಲೆಮಾರಿಗಾಗಿ ವಿನ್ಯಾಸಗೊಳಿಸಲಾದ ಲೈಟ್ ವೈಟ್ (ಹಗುರ ತೂಕದ) ಆಭರಣಗಳ ಬ್ಯಾಂಡ್ ಮತ್ತು "ಮೈ ಬ್ಲೂ ಡೈಮಂಡ್" ಎಂಬ ವಿಶಿಷ್ಟ ಐಷಾರಾಮಿ ವಜ್ರ ಸಂಗ್ರಹವನ್ನು ಪರಿಚಯಿಸುವುದು ಒಳಗೊಂಡಿದೆ. ಈ ಪ್ರಯತ್ನಗಳು ಬಿಂದು ಜ್ಯುವೆಲ್ಲರಿಯನ್ನು ಸಾಂಪ್ರದಾಯಿಕ ಕುಟುಂಬ ಬ್ಯಾಂಡ್‌ನಿಂದ ಶಾಶ್ವತ ಪರಂಪರೆ ಮತ್ತು ಆಧುನಿಕ ಸಂವೇದನೆಗಳಿಗೆ ಸಮನಾಗಿ ಪ್ರತಿಧ್ವನಿಸುವ ಸಮಕಾಲೀನ ಶಕ್ತಿಕೇಂದ್ರವಾಗಿ ರೂಪಾಂತರಗೊಳ್ಳುವ ಪ್ರಯಾಣವನ್ನು ಗುರುತಿಸುತ್ತವೆ.
ಈ ಹೊಸ ಯೋಜನೆಗಳೊಂದಿಗೆ, ಬಿಂದು ಜ್ಯುವೆಲ್ಲರಿ ದಕ್ಷಿಣ ಭಾರತದ ಪ್ರಮುಖ ಆಭರಣ ಬ್ಯಾಂಡ್‌ಗಳಲ್ಲಿ ಒಂದಾಗಿ ಹೊರಹೊಮ್ಮಲು ಸಜ್ಜಾಗಿದೆ. ಜೊತೆಗೆ, ಅಂತರರಾಷ್ಟ್ರೀಯ ವಿಸ್ತರಣೆಗಾಗಿ ಯೋಜನೆಗಳನ್ನು ರೂಪಿಸುತ್ತಾ ಜಾಗತಿಕ ಮಾರುಕಟ್ಟೆಯತ್ತ ದೃಷ್ಟಿ ನೆಟ್ಟಿದೆ. ಕಳೆದ ನಾಲ್ಕು ದಶಕಗಳಿಂದ ಬ್ಯಾಂಡ್‌ಗೆ ಮಾರ್ಗದರ್ಶಕವಾಗಿರುವ ಪ್ರಾಮಾಣಿಕತೆ, ಸೃಜನಶೀಲತೆ ಮತ್ತು ಗ್ರಾಹಕರ ವಿಶ್ವಾಸ ಈ ದೂರದೃಷ್ಟಿತ್ವಕ್ಕೆ ಬೆಂಬಲವಾಗಿದೆ.
ಬಿಂದು ಜ್ಯುವೆಲ್ಲರಿ ತನ್ನ ಗ್ರಾಹಕರ ವಿಶ್ವಾಸಕ್ಕೆ ಪ್ರತಿಫಲವಾಗಿ ನವೀನ ಉಳಿತಾಯ ಯೋಜನೆಗಳಾದ ಅಕ್ಷಯನಿಧಿ ಮತ್ತು ಸ್ವರ್ಣ ಬಿಂದು ಮಾಸಿಕ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳ ಮೂಲಕ ಗ್ರಾಹಕರು ಪ್ರತಿ ತಿಂಗಳು ಹೂಡಿಕೆ ಮಾಡಿ ಆಕರ್ಷಕ ಬೋನಸ್ ಹಾಗೂ ಪ್ರಯೋಜನಗಳನ್ನು ಪಡೆಯಬಹುದು. ಅದೇ ರೀತಿ, ಅಡ್ವಾನ್ಸ್ ಬುಕ್ಕಿಂಗ್ ಯೋಜನೆ ಗ್ರಾಹಕರಿಗೆ ಬಂಗಾರವನ್ನು ನಿಗದಿತ ದರದಲ್ಲಿ ಕಾಯ್ದಿರಿಸುವ ಅವಕಾಶವನ್ನು ನೀಡುತ್ತದೆ. ಇದರಿಂದ ಮಾರುಕಟ್ಟೆಯ ಅಸ್ಥಿರತೆಗೂ ಮುನ್ನವೇ ಖರೀದಿ ಮಾಡಲು ಅನುಕೂಲವಾಗುತ್ತದೆ. ಈ ಎಲ್ಲ ಯೋಜನೆಗಳು ಬಿಂದು ಜ್ಯುವೆಲ್ಲರಿಯ ಮೂಲ ಉದ್ದೇಶವನ್ನು ಮತ್ತೊಮ್ಮೆ ದೃಢಪಡಿಸುತ್ತವೆ ಅಂದರೆ, ಆರ್ಥಿಕ ಪರಿಸ್ಥಿತಿ ಹೇಗಿದ್ದರೂ ಗ್ರಾಹಕರ ಜೊತೆಗೆ ನಿಂತು, ಅವರಿಗೆ ಯೋಜಿತವಾಗಿ ಉಳಿತಾಯ, ಹೂಡಿಕೆ ಮಾಡಲು ಮತ್ತು ತಮ್ಮ ಅಮೂಲ್ಯ ಕ್ಷಣಗಳನ್ನು ಸಂತೋಷದಿಂದ ಆಚರಿಸಲು ನೆರವಾಗುವುದು.
ವ್ಯಾಪಾರದ ಯಶಸ್ಸಿನ ಜೊತೆಗೆ, ಬಿಂದು ಜ್ಯುವೆಲ್ಲರಿ ಸದಾ ಸಮಾಜಕ್ಕೆ ಸಹಾಯ ನೀಡುವ ನಂಬಿಕೆಯಲ್ಲಿ ನಿಂತಿದೆ. "ಸ್ವರ್ಣ ಬಿಂದು ಸಿಎಸ್‌ಆರ್" ಕಾರ್ಯಕ್ರಮಗಳ ಮೂಲಕ ಮಹಿಳಾ ಸಬಲೀಕರಣ, ಶಿಕ್ಷಣ ಮತ್ತು ಸಮುದಾಯ ಕಲ್ಯಾಣಕ್ಕೆ ಒತ್ತು ನೀಡುತ್ತದೆ. ಈ ಕಾರ್ಯಕ್ರಮಗಳು ಮಹಿಳಾ ಕಲಾವಿದರಿಗೆ ಪ್ರೋತ್ಸಾಹ ನೀಡುವುದು, ಸ್ಥಳೀಯ ಸಮುದಾಯಗಳನ್ನು ಬೆಂಬಲಿಸುವುದು ಮತ್ತು ಸ್ವಾತಂತ್ರ್ಯ ಹಾಗೂ ಗೌರವವನ್ನು ಪ್ರೇರೇಪಿಸುವ ಅವಕಾಶಗಳನ್ನು ಸೃಷ್ಟಿಸುವುದನ್ನು ಉದ್ದೇಶಿಸುತ್ತವೆ. ಇದು ನಿಜವಾದ ಸಮೃದ್ಧಿ ಎಂದರೆ ಹಂಚಿಕೆಯ ಸಮೃದ್ಧಿ ಎಂಬ ಬ್ಯಾಂಡ್‌ನ ಆಳವಾಗಿ ಬೇರೂರಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.
ಈ ಸಂಭ್ರಮವನ್ನು ಮತ್ತಷ್ಟು ವೈಭವದಿಂದ ಆಚರಿಸುವ ಸಲುವಾಗಿ ಉದ್ಘಾಟನೆಗೆ ದಕ್ಷಿಣ ಭಾರತದ ನಟಿ ಸ್ನೇಹ ಪ್ರಸನ್ನ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದೇವೆ. ಜೊತೆಗೆ ಗಣ್ಯ ಸಂಸದರು, ಶಾಸಕರು, ಪ್ರಸಿದ್ಧ ಉದ್ಯಮಿಗಳು ಭಾಗವಹಿಸುವುದರ ಮೂಲಕ ಈ ಕಾರ್ಯಕ್ರಮವು ಒಂದು ಮಹತ್ವಪೂರ್ಣವೆಂದು ತೋರಿಸಲಿದ್ದಾರೆ. ಈ ಸಮಾರಂಭದಲ್ಲಿ ಮೈ ಬ್ಲೂ ಡೈಮಂಡ್ ಮತ್ತು ಸ್ವರ್ಣ ಬಿಂದು ಸಿಎಸ್‌ಆರ್ ಲೋಗೋಗಳ ಅನಾವರಣವು ಬ್ಯಾಂಡ್‌ನ ಹೊಸ ಯುಗದ ಪ್ರಾರಂಭವನ್ನು ಸೂಚಿಸುತ್ತದೆ ಅಲ್ಲಿ ಐಷಾರಾಮಿ ಉದ್ದೇಶವನ್ನು ಪೂರೈಸುತ್ತದೆ ಮತ್ತು ಸಂಪ್ರದಾಯವು ಪ್ರಗತಿಯನ್ನು ಅಳವಡಿಸಿಕೊಳ್ಳುತ್ತದೆ.
ಇಂದು, 40 ವರ್ಷಗಳ ಸ್ವರ್ಣ ಪರಂಪರೆಯೊಂದಿಗೆ ಬಿಂದು ಜ್ಯುವೆಲ್ಲರಿ ಉತ್ತುಂಗ ಸ್ಥಾನದಲ್ಲಿರುವಂತೆ, ತನ್ನ ಮೂಲ ಉದ್ದೇಶವನ್ನು ಪುನಃ ದೃಢಪಡಿಸುತ್ತದೆ “ಆಭರಣವು ಕೇವಲ ಧರಿಸುವುದಕ್ಕೆ ಮಾತ್ರವಲ್ಲ, ಅದು ನೆನಪಿನಲ್ಲಿ ಉಳಿಯಬೇಕು; ಕೇವಲ ಖರೀದಿಯಲ್ಲ, ಪ್ರೀತಿಯಿಂದ ಕಾಪಾಡಬೇಕು”. ಕಾಸರಗೋಡಿನಲ್ಲಿ ಆರಂಭವಾದ ಈ ಪ್ರಯಾಣವು ಪ್ರತಿಯೊಂದು ಹೊಸ ಅಧ್ಯಾಯದೊಂದಿಗೆ ಇನ್ನೂ ಹೆಚ್ಚು ಹೊಳೆಯುತ್ತಾ ಮುಂದುವರಿಯುತ್ತದೆ ಮತ್ತು ಕರಕುಶಲತೆ, ವಿಶ್ವಾಸ ಮತ್ತು ಗ್ರಾಹಕರೊಂದಿಗೆ ಶಾಶ್ವತ ಸಂಬಂಧವನ್ನು ಕಾಪಾಡುವುದಾಗಿ ಜೀವನಪರ್ಯಂತದ ಭರವಸೆಯನ್ನು ನೀಡುತ್ತದೆ.