ವರದಿ ರಾಯಿ ರಾಜಕುಮಾರ

ಮೂಡುಬಿದಿರೆ: ಬಹಳ ಶ್ರೇಷ್ಠ ಬುಕ್ ಆಫ್ ರೆಕಾರ್ಡ್ಸ್ ಗೆ ಏಷ್ಯಾದಲ್ಲಿಯೇ ಖ್ಯಾತರೊಬ್ಬರನ್ನು ದಾಖಲೀಕರಣರಾಗಿ ಕರೆಯಿಸಿದ್ದೆ. ಒಂದು ಹಾಡಿಗೂ ಇನ್ನೊಂದು ಹಾಡಿಗೂ ಕೇವಲ 59 ಸೆಕೆಂಡುಗಳ ಅವಕಾಶ ಮಾತ್ರ ಲಭ್ಯವಿತ್ತು. ಒಟ್ಟಾರೆ 70 ಬಾಟ್ಲಿಯಷ್ಟು ನೀರನ್ನು ನಾನು ಇಡೀ ದಿನದ ಹಾಡಿನ ಸಂದರ್ಭದಲ್ಲಿ ಖಾಲಿ ಮಾಡಿದ್ದೆ ಹೊರತು ಬೇರೇನೂ ಸ್ವೀಕರಿಸಲಿಲ್ಲ. ಸುಮಾರು 70 ಮಂದಿ ತಾಂತ್ರಿಕ ತಜ್ಞರುಗಳು ನನ್ನನ್ನು ಪ್ರತಿ ನಿಮಿಷವು ಎಚ್ಚರಿಸುತ್ತಿದ್ದರು ಎಂದು 42 ವರ್ಷದ ಯಶವಂತ್ ಎಂಜಿ ತಮ್ಮ ಅನುಭವವನ್ನು ಹಂಚಿಕೊಂಡರು. ಕೇವಲ ಎಸ್ಪಿಬಿ ಅವರು ಹಾಡಿದ ಕನ್ನಡ ಗೀತೆಯನ್ನು ಮಾತ್ರ ನಾನು ಆಯ್ಕೆ ಮಾಡಿಕೊಂಡಿದ್ದೆ ಎಂದು ತಿಳಿಸಿದರು. ನಿವೃತ್ತ ನೌಕರರ ಸಂಘದವರು ಅಕ್ಟೋಬರ್ 18ರಂದು ಖ್ಯಾತ ಗಾಯಕ ಎಂ ಜಿ ಯಶವಂತ್ ಅವರನ್ನು ಸನ್ಮಾನಿಸಿದರು.

ಲೋಕಾಭಿರಾಮವಾಗಿ ಮಾತಾಡಿದ ಸದಾಶಿವ ಶೆಟ್ಟಿ ಅವರು ಶಾಂತಿ, ನೆಮ್ಮದಿ, ಕ್ರಿಯಾತ್ಮಕ ಅನುಭವಗಳ ನಿವೃತ್ತರು ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕೆಂದು ಆಶಿಸಿದರು. ಸಂಘದ ಅಧ್ಯಕ್ಷ ತುಕ್ರಪ್ಪ ಕೆಂಬಾರೆ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಲ್‌ಜೆ ಫೆನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದ್ದರು. ಶಾಲಿನಿ ಧನ್ಯವಾದ ಸಲ್ಲಿಸಿದರು.