ಬದುಕು ಹೀಗೇಕೆ ಅಂತಾ ಒಮ್ಮೆ ಆದರೂ ಯೋಚನೆ ಬಂದೆ ಬರುತ್ತದೆ ಅಲ್ವಾ ?ಖಂಡಿತಾ ಬಂದಿರುತ್ತದೆ ಯಾಕೆಂದರೆ ಬದುಕೇ ಹಾಗೆ ಅಲ್ಲಿ ಎಲ್ಲಾವೂ ನಿಗೂಢ ಉತ್ತರ ಸಿಗದ ಪ್ರಶ್ನೆಗಳೇ ಹೆಚ್ಚು ಎಲ್ಲಾರ ಬದುಕು ಒಂದೇ ತರ ಇರಲ್ಲಾ ಆದರೆ ಎಲ್ಲಾರೂ ಬದುಕಲ್ಲಿ ಒಂದಾಲ್ಲ ಒಂದು ತರದ ನೋವು ಯಾತನೆಗಳನ್ನ ಅನುಭವಿಸುತ್ತಾರೆ

ನಾವು ಊಹೆ ಮಾಡಿ ಇರದ ಸಾವು ನೋವು ನಮ್ಮ ಕಣ್ಣು ಮುಂದೆ ಬಂದು ಆರ್ಭಟಿಸಿರುತ್ತದೆ.ನಮಗೆ ಊಹೆಗೂ ನಿಲುಕದ ಘಟನೆಗಳು ಕ್ಷಣದಲ್ಲೇ ನಡೆದಿರುತ್ತದೆ. ನಾವು ಲೆಕ್ಕಚಾರ ಹಾಕಿ ಏಣಿಸಿದ್ದು ಯಾವುದು ನೆಡೆಯುವುದಿಲ್ಲ. ಒಮ್ಮೆ ಬದುಕು ಬೇಡಾ ಅನಿಸುವುದು ಸಹಜ ಹಾಗೆಯೇ ಒಮ್ಮೆ ಬದುಕು ಅದೆಷ್ಟೋ ಸುಂದರ ಅಂತಾನೂ ಅನಿಸತ್ತೆ.

ಬದುಕು ಮುಳ್ಳಂತ ಇಲ್ಲ ಬದುಕು ಹೂ ಅಂತಾ ಅಲ್ಲ ಬದುಕು ಅರ್ಥ ವಾಗದೇ ವಿಚಿತ್ರವಾಗಿ ಕಂಡರೂ ನಮ್ಮ ನಮ್ಮ ಬದುಕನ್ನ ಸುಂದರವಾಗಿಸಿಕೊಳ್ಳುವ  ಸಾಮರ್ಥ್ಯವನ್ನು ಭಗವಂತ ನಮಗೆ ನೀಡಿದ್ದಾನೆ ನಮ್ಮ ಬದುಕು ನಾವು ಬರೆಯುವ ಕಥೆ ಆಗಿರಬೇಕು. ಬದುಕು ಬಂದಂತೆ ಸ್ವೀಕರಿಸಿ ಗೆಲ್ಲಬೇಕು.ಏನೇ ಬಂದರು ಎಲ್ಲಾವನ್ನು ಎದುರಿಸಿ ಸಾಧಿಸಬೇಕು ನಮ್ಮ ಬದುಕನ್ನ ನಾವೇ ಸಾರ್ಥಕವಾಗಿಸಿಕೊಳ್ಳಬೇಕು‌.ಬದುಕು ಅದೆಷ್ಟೇ ವಿಚಿತ್ರವಾದರೂ ನನ್ನ ಬದುಕಿನ ಹೀರೋ ನಾವೇ ಎನ್ನುವುದು ನೆನಪಿರಲಿ.

By  ರೇಷ್ಮಾ ಶೆಟ್ಟಿ