ಯುಗಾದಿ ಎಂದರೆ  ಯುಗದ ಆರಂಭ. ಸಂಸ್ಕೃತ ಭಾಷೆಯಲ್ಲಿ ಯುಗದ ಆದಿ ಎರಡು ಪದಗಳಿಂದ ಯುಗಾದಿ ಪದ ಬಂದಿತು.ಯುಗಾದಿ ಎಂದರೆ ಪ್ರಕೃತಿ  ಮಧುಮಗಳಂತೆ ಶೃಂಗರಿಕೊಳ್ಳುವ ಸುದಿನ. ಬ್ರಹ್ಮನು ಕೂಡ ಸೃಷ್ಠಿಯನ್ನು ಸೃಷ್ಠಿಸುವ ಕಾರ್ಯ ಕೂಡ ಇಂದೇ ಪ್ರಾರಂಭಿಸಿದನು ಎಂಬ ನಂಬಿಕೆ ಇದೆ.

ಅಸುರಿ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯ ದಿನವಿದು. ಶ್ರೀರಾಮ ರಾವಣನ್ನು ಸಂಹರಿಸಿ ಅಯೋಧ್ಯೆಗೆ ಬಂದ ರಾಮ ರಾಜ್ಯವಾಳಲು ಆರಂಭಿಸಿದನು.ಅಯೋಧ್ಯೆಯ ಪ್ರಜೆಗಳು ಸಂತೋಷದಿಂದ ಮನೆ ಮುಂದೆ ವಿಜಯ ಪತಾಕೆಯನ್ನು ಹಾರಿಸಿದರು.ಅದೇ ಇಂದಿಗೂ ಆಚರಿಸುತ್ತಿರುವ ಪದ್ಧತಿ ಗುಡಿ ಪಾಡ್ಯ ಅಥವಾ ಗುಡಿ ಬಾವುಟ ಎನ್ನುತ್ತಾರೆ. ಯುಗಾದಿ ಎಂದರೆ ಹಬ್ಬಗಳಲ್ಲಿ ಶ್ರೇಷ್ಠ ನಮ್ಮ ಹಬ್ಬಗಳಿಗೆ ತನ್ನದೆ ಆದ ಹಿನ್ನಲೆಗಳಿವೆ 

ಈ ಮೂಲಕ ಹಲವು ಸಂದೇಶ ಸಾರುವುದು.

ಹಬ್ಬದ ದಿನ ಬೆಳಗ್ಗೆ ಬೇಗ ಎದ್ದು ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆಯನ್ನು ಧರಿಸಿ ದೇವರನ್ನು ಸ್ಮರಿಸಿ ಹಿರಿಯರ ಆರ್ಶಿವಾದ ಪಡೆದು ಬೇವು ಬೆಲ್ಲ ತಿನ್ನಲಾಗುತ್ತದೆ.ಬೇವು ಕಷ್ಟದ ಪ್ರತೀಕ ಬೆಲ್ಲ ಸುಖದ ಪ್ರತೀಕ ಜೀವನದಲ್ಲಿ ಬೇವು ಬೆಲ್ಲ ಸಮನಾಗಿ ಸ್ವೀಕರಬೇಕು ಬೇವು ಬೆಲ್ಲ ತಿಂದು ಒಳ್ಳೆಯ ಮಾತಾಡು ಎಂದು ಈ ಹಬ್ಬ ಸಾರುತ್ತದೆ ಬೇವು ಬೆಲ್ಲ ಅದರದೇ ಆದ ವೈಶಿಷ್ಟ್ಯಗಳು ಹೊಂದಿದೆ.

ಕಹಿಯನ್ನ ಕಳೆದು ಸಿಹಿಯನ್ನು ಗುಣಿಸೋಣ

- ಅಂಜಲಿ ಶಿದ್ಲಿಂಗ್