ಬಲ್ಮಠದಲ್ಲಿರುವ ರೀಸೈಕಲ್ ದ ಲಾಂಜ್ ಪಬ್ ಮೇಲೆ ದಾಳಿ ಮಾಡಿದ ಬಜರಂಗ ದಳದವರು ಮತ್ತೊಂದು ಅಹಿತಕರ ಘಟನೆ ನಡೆಸುವ ಹಂತದಲ್ಲಿ ಇದ್ದರು.
2009ರಲ್ಲಿ ಅಮ್ನೇಸಿಯಾ ಪಬ್ ಮೇಲೆ ದಾಳಿ ಮಾಡಿದ ಬಲಪಂಥೀಯರು ಭಾರೀ ಅನಾಹುತಕ್ಕೆ ಕಾರಣರಾಗಿದ್ದರು.
ಸೋಮವಾರ ರೀಸೈಕಲ್ ದ ಲಾಂಜ್‌ನಲ್ಲಿ ಹುಡುಗ ಹುಡುಗಿಯರು ಪಾರ್ಟಿ ಮಾಡುವಾಗ ಒಳನುಗ್ಗಿದ ಬಜರಂಗ ದಳದವರು ಎಲ್ಲರೂ ಹೊರಹೋಗುವಂತೆ ಬೆದರಿಕೆ ಹಾಕಿದರು. ಒಬ್ಬಿಬ್ಬರನ್ನು ಹೊರ ತಳ್ಳಿದರು ಎಂದೂ ತಿಳಿದು ಬಂದಿದೆ. ಅನಂತರ ಪೋಲೀಸರು ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದರು.