ಕಾರ್ಕಳದಲ್ಲಿ ನಡೆದ ಧರ್ಮ ಸಂರಕ್ಷಣಾ ಸಭೆಯಲ್ಲಿ ಮಾತನಾಡಿದ ಪವರ್ ಟೀವಿ ವ್ಯವಸ್ಥಾಪಕ ರಾಕೇಶ್ ಶೆಟ್ಟಿ ವಿರುದ್ಧ ಬೆಳ್ತಂಗಡಿಯ ಮಾಜೀ ಶಾಸಕ ವಸಂತ ಬಂಗೇರ ಅವರ ಅಭಿಮಾನಿಗಳು ಇಮ್ಮಡಿ ದೂರು ಸಲ್ಲಿಸಿದ್ದಾರೆ.
ಮಾಜೀ ಶಾಸಕರ ವಿರುದ್ಧ ರಾಕೇಶ್ ಶೆಟ್ಟಿ ಮಾನಹಾನಿಕರ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ದೂರಲಾಗಿದೆ. ಧರ್ಮಸ್ಥಳ ಪೋಲೀಸು ಠಾಣೆಯಲ್ಲಿ ಗ್ರೇಸಿಯನ್ ವೇಗಸ್, ನಮಿತಾ, ಬಿ. ಎಂ. ಭಟ್, ಸಂಜೀವ ನಾಯ್ಕ, ಸೆಬಾಸ್ಟಿಯನ್ ಮೊದಲಾದವರು ಮತ್ತು ಪುಂಜಾಲಕಟ್ಟೆ ಪೋಲೀಸು ಠಾಣೆಯಲ್ಲಿ ವಿನ್ಸೆಂಟ್ ಮಡಂತ್ಯಾರ್, ಪುನೀತ್, ಪದ್ಮನಾಭ ಸಾಲಿಯಾನ್, ಬೇಬಿ ಸುವರ್ಣ, ಬೇಬಿ ಮಚ್ಚಿನ ಮೊದಲಾದವರು ದೂರು ದಾಖಲು ಮಾಡಿದ್ದಾರೆ.