ಮಂಗಳೂರು: ವಿಟಿಯು ಅಂತರ ಕಾಲೇಜು 2022-23, ಬೆಂಗಳೂರು ಉಳಿದ ವಿಭಾಗದ ಪುರುಷ ನೆಟ್‍ಬಾಲ್ ಮತ್ತು ರಾಜ್ಯ ಮಟ್ಟದ ಮಹಿಳಾ ನೆಟ್‍ಬಾಲ್ ಪಂದ್ಯಾವಳಿಯನ್ನು 29 ಮಾರ್ಚ್ 2023 ರಂದು ಸಂತ ಜೋಸೆಫ್‍ ಎಂಜಿನಿಯರಿಂಗ್‍ ಕಾಲೇಜು ಮೈದಾನದಲ್ಲಿ ದೈಹಿಕ ಶಿಕ್ಷಣ ಇಲಾಖೆ, ಎಸ್‍ಜೆಇಸಿ ಬ್ಯಾನರ್ ನ ಅಡಿಯಲ್ಲಿ  ಪಂದ್ಯದ ಅಧಿಕಾರಿಗಳು ಸೇರಿದಂತೆ ವಿವಿಧ ಗಣ್ಯರ ಸಮ್ಮುಖದಲ್ಲಿ ಯಶಸ್ವಿಯಾಗಿ ಉದ್ಘಾಟಿಸಲಾಯಿತು.

ಎಸ್‍ಜೆಇಸಿಯ ಸಹಾಯಕ ನಿರ್ದೇಶಕರಾದ ವಂ. ಫಾ. ಅಲ್ವಿನ್‍ ರಿಚರ್ಡ್ ಡಿ'ಸೋಜ ಅವರು ಮುಖ್ಯ ಅತಿಥಿಯಾಗಿ ಮತ್ತು ನಿರ್ದೇಶಕರಾದ ವಂ. ಫಾ. ವಿಲ್ಫ್ರೆಡ್ ಪ್ರಕಾಶ್ ಡಿ'ಸೋಜ ಕಾರ್ಯಕ್ರಮದ ಅಧ್ಯಕ್ಷರಾಗಿ ಭಾಗವಹಿಸಿದ್ದರು. ಗೌರವ ಅಧ್ಯಕ್ಷರಾಗಿ ಪ್ರಾಂಶುಪಾಲರಾದ ಡಾ.ರಿಯೋ ಡಿ'ಸೋಜ, ಉಪಪ್ರಾಂಶುಪಾಲರಾದ ಡಾ. ಪುರುಷೋತ್ತಮ ಚಿಪ್ಪಾರ್ ಮತ್ತು ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್‍ ರಮಾನಂದ ಎಚ್.ಎಸ್., ಕಾಲೇಜಿನ ಮಾನವ ಸಂಪನ್ಮೂಲ ವ್ಯವಸ್ಥಾಪಕರಾದ ರಾಕೇಶ್ ಲೋಬೋ, ಕ್ರೀಡಾ ಸಲಹೆಗಾರರಾದ ಪೂರ್ಣೇಶ್ ಎಂ ಮತ್ತು ಪಿಇಡಿ ವನೀಶಾ ರೋಡ್ರಿಗಸ್‍ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವು ಪ್ರಾರ್ಥನೆಯೊಂಧಿಗೆ ಪ್ರಾರಂಭವಾಯಿತು ಮತ್ತು  ಪೂರ್ಣೇಶ್ ಎಂ ಸಭೆಯನ್ನು ಸ್ವಾಗತಿಸಿದರು. ಸಭೆಯನ್ನು ಉದ್ದೇಶಿಸಿ ಮಾತಾನಾಡಿದ ಮುಖ್ಯ ಅತಿಥಿ ಹಾಗೂ ಗೌರವ ಅಧ್ಯಕ್ಷರು ಭಾಗವಹಿಸುತ್ತಿರುವ ತಂಡಗಳಿಗೆ ಶುಭ ಹಾರೈಸಿದರು.

ವನೀಶಾ ರೋಡ್ರಿಗಸ್ ವಂದಿಸಿದರು. ಜೋಯಲ್‍ ಡಿಮೆಲ್ಲೋ ಮತ್ತು  ಸ್ಮಿತಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯಕ್ಕೆ (ವಿಟಿಯು) ಸಂಯೋಜಿತವಾಗಿರುವ ವಿವಿಧ ಸಂಸ್ಥೆಗಳ ವಿದ್ಯಾರ್ಥಿ ತಂಡಗಳು ತಮ್ಮ ಕೌಶಲ್ಯ ಮತ್ತು ಸಾಮಥ್ರ್ಯಗಳನ್ನು ಪ್ರದರ್ಶಿಸುವ ಮೂಲಕ ಪಂದ್ಯಾವಳಿಯನ್ನು ಹೆಚ್ಚು ಸವಾಲಿನ ಮತ್ತು ಆಸಕ್ತಿದಾಯಕವಾಗಿಸಲು ಪಂದ್ಯಾವಳಿಯು ಸಾಕ್ಷಿಯಾಯಿತು.