ಉಳ್ಳಾಲ: ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ) ವತಿಯಿಂದ ನಡೆಯುವ ‘2022-23ರ ವೀರರಾಣಿ ಅಬ್ಬಕ್ಕ ಉತ್ಸವ’ ದ ಆಮಂತ್ರಣ ಪತ್ರಿಕೆಯನ್ನು ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಪ್ರಧಾನ ಗುರಿಕಾರರಾದ ಮಂಜಪ್ಪಕಾರ್ನವರ್ ಬಿಡುಗಡೆಗೊಳಿಸಿ ಈ ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕರು ಹಾಗೂ ಸ್ವಾಗತಾಧ್ಯಕ್ಷರಾದ ಕೆ.ಜಯರಾಮ ಶೆಟ್ಟಿಯವರು ಮಾತನಾಡಿ 1997ರಲ್ಲಿ ಪ್ರಾರಂಭವಾದ ಉಳ್ಳಾಲ ವೀರರಾಣಿ ಅಬ್ಬಕ್ಕಉತ್ಸವ ಸಮಿತಿ(ರಿ)ಯು ಪ್ರತಿವರ್ಷ ವಿಜೃಂಭಣೆಯಿಂದ ವೀರರಾಣಿ ಅಬ್ಬಕ್ಕ ಉತ್ಸವವನ್ನು ಆಚರಿಸುತ್ತಾ ಬಂದಿದ್ದು ಈ ಸಲ ಫೆಬ್ರವರಿ 4, 2023ರಂದು ನಡೆಯುವ ಉತ್ಸವದಲ್ಲೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ದಿನಕರ ಉಳ್ಳಾಲ್, ಗೌರವ ಉಪಾಧ್ಯಕ್ಷರಾದ ಸದಾನಂದ ಬಂಗೇರ, ಉಪಾಧ್ಯಕ್ಷರಾದ ಯು.ಪಿ.ಆಲಿಯಬ್ಬ, ಕಾರ್ಯದರ್ಶಿಗಳಾದ ಡಿ.ಎನ್.ರಾಘುವ, ಎಂ.ವಾಸುದೇವರಾವ್, ಸತೀಶ್ ಭಂಡಾರಿ, ಭಾಸ್ಕರ, ರತ್ನಾವತಿ ಜೆ ಬೈಕಾಡಿ, ಶಶಿಕಲಾ ಗಟ್ಟಿ, ಅನುಪಮ ಸಿ, ಹೇಮಾಯು, ವಾಣಿ ಲೋಕಯ್ಯ, ಕ್ಲೇರಾ ಕುವೆಲ್ಲೊ, ಮಾಧವಿ ಉಳ್ಳಾಲ್, ಸತ್ಯವತಿ ಜೆ.ಕೆ, ದೇವಕಿಯು ಬೋಳಾರ್, ಸುಷ್ಮಾ ಜನಾರ್ಧನ್, ರಾಜೀವಿ ಕೆಂಪು ಮಣ್ಣು, ಸೇವಂತಿ ಶ್ರೀಯಾನ್, ಲತಾ ಶೀಧರ್, ಸುಮಂಗಲ ಸಿ ಕೋಟ್ಯಾನ್, ಭಾನುಮತಿ, ಮಲ್ಲಿಕಾ ಉಳ್ಳಾಲ್‍ಬೈಲ್, ಸ್ವಪ್ನ ಶೆಟ್ಟಿ, ಸುಜಾತ ಮುಂತಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿಗಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಆನಂದ ಕೆ ಅಸೈಗೋಳಿ ವಂದಿಸಿದರು.