ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ) ಸಂಘುಟನಾ ಕಾರ್ಯದರ್ಶಿ ಹರಿಣಿ ವಿಜೇಂದ್ರರವರು ಇತ್ತೀಚೆಗೆ ನಮ್ಮನ್ನು ಅಗಲಿದ್ದಾರೆ.  ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವ ಸಲುವಾಗಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಶ್ರದ್ದಾಂಜಲಿ ಸಭೆ ನಡೆಸಲಾಯಿತು. ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ಧನಲಕ್ಷ್ಮಿ ಗಟ್ಟಿಯವರು ನುಡಿ ನಮನ ಸಲ್ಲಿಸಿದರು.

ಸರಳ ಸೌಜನ್ಯದ, ನಗುಮೊಗದ ಹಾಗೂ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದು, ಚಿಲಿಂಬಿಯ ಶಾರದ ಮಹಿಳಾ ಮಂಡಲ, ಶಾರದಾ ನಿಕೇತನದ ಅಧ್ಯಕ್ಷರಾಗಿ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ,  ಅಖಿಲ ಭಾರತ ತುಳು ಒಕ್ಕೂಟದ  ಸದಸ್ಯೆ, ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಕಾರ್ಯದರ್ಶಿ, ನೆಹರೂ ಮೈದಾನಿನ ಹಿಂದೂ ಯುವಸೇನೆಯ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ, ನಗರದ ಕ್ರೀಡಾ ಭಾರತೀಯ ಮಹಿಳಾ ಸಹಪ್ರಮುಖ್, ಭಂಡಾರಿ ಸ್ವಯಂಸೇವಕ ಸಂಘುದ ಆಧ್ಯಕ್ಷರಾಗಿ ಹೀಗೆ ವಿವಿಧ ಕ್ಷೇತ್ರಗಳಿಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ ಅವರ ಕಾರ್ಯವೈಖರಿಯನ್ನು ಅಬ್ಬಕ್ಕ ಉತ್ಸವ ಸಮಿತಿಯ ಕಾರ್ಯದರ್ಶಿ ಹಾಗೂ ಬೆಸೆಂಟ್ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ರತ್ನಾವತಿ ಜೆ ಬೈಕಾಡಿಯವರು ನೆನಪಿಸಿಕೊಂಡರು.

ಸಭೆಯ ಅಧ್ಯಕ್ಷತೆಯನ್ನು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷರಾದ ದಿನಕರ ಉಳ್ಳಾಲ್ ವಹಿಸಿದ್ದರು. ಸ್ವಾಗತಾಧ್ಯಕ್ಷರಾದ ಕೆ.ಜಯರಾಮ ಶೆಟ್ಟಿಯವರು ಉಪಸ್ಥಿತರಿದ್ದರು. ಸಮಿತಿಯ ಪದಾಧಿಕಾರಿಗಳಾದ ವಾಸುದೇವ ರಾವ್, ಡಿ.ಎನ್.ರಾಘವ, ಅಬ್ದುಲ್ ಅಜೀಜ್ ಹಕ್, ಕೆ.ಎಂ.ಕೆ.ಮಂಜನಾಡಿ, ಸತೀಶ್ ಭಂಡಾರಿ, ಚಿದಾನಂದ ಎ, ಇಮ್ತಿಯಾಝ್ ಉಳ್ಳಾಲ್, ರತ್ನಾವತಿ ಜೆ.ಬೈಕಾಡಿ,  ಮಲ್ಲಿಕಾ ಎಸ್ ಭಂಡಾರಿ, ಶಶಿಕಲಾ ಗಟ್ಟಿ, ಶಶಿಕಾಂತಿ ಉಳ್ಳಾಲ್, ವಸಂತಿ ಮರೋಳಿ, ಲತಾ ತಲಪಾಡಿ, ಲತಾ ಶ್ರೀಧರ್,  ಸ್ವಪ್ನಾ ಶೆಟ್ಟಿ, ವಾಣಿ ಗೌಡ, ಮುಂತಾದವರು ಉಪಸ್ಥಿತರಿದ್ದರು.ಕೋಶಾಧಿಕಾರಿ ಆನಂದ ಕೆ ಅಸೈಗೋಳಿ ಧನ್ಯವಾದ ಸಮರ್ಪಿಸಿದರು.