ಪಾಂಡೇಶ್ವರ, ಮಂಗಳೂರು: ಕರ್ನಾಟಕ ಶಿವ ಸೇವಾ ಸಮಿತಿ (ರಿ ). ಪಾಂಡೇಶ್ವರ ಇದರ 92 ನೇ ವಾರ್ಷಿಕೋತ್ಸವ ದಿನಾಂಕ 16 ಮತ್ತು 17 ರಂದು ನಡೆಯಲಿರುವ ಸಂದರ್ಭದಲ್ಲಿ ದಿನಾಂಕ 17 ರಂದು ಬಿಡುಗಡೆ ಗೊಳ್ಳಲಿರುವ ನಮ್ಮ ಸಮಿತಿ ಯ "ಭಕ್ತಿ ಸುಗಿಪು "ಶಿವ -ಆರಾಧನೆ "ಮತ್ತು "ಶ್ರೀ ಕ್ಷೇತ್ರಪಾಲ ಗುಳಿಗ "ಎಂಬ 2 ಗೀತೆಗಳ "ಪೋಸ್ಟರ್ "ಬಿಡುಗಡೆ ಕಾರ್ಯಕ್ರಮ ಭಜನಾ ಮಂದಿರ ದಲ್ಲಿ ಬಹಳ ಯಶಸ್ವಿ ಯಾಗಿ "ಶ್ರೀ ಕ್ಷೇತ್ರ ಭ್ರಮಮರಾಂಬಿಕೆ ಇದರ ಧರ್ಮದರ್ಶಿ "ಪ್ರಣೇಶ್ ಅತ್ತಾವರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಅತಿಥಿಗಳಾದ "ಪಿಂಗಾರ"ಪತ್ರಿಕೆಯ ರೈಮಂಡ್ ಡಿ ಕುನಾ.
ನ್ಯಾಷನಲ್ ಟುಟೋರಿಯಲ್ ಇದರ ಪ್ರಾಂಶುಪಾಲರಾದ ಶ್ರೀ ಖಾಲಿದ್ ಉಜಿರೆ. "ಶ್ರೀ ಕೊರಗಜ್ಜ ದೈವ ಸೇವಾ ಸಮಿತಿ "ಸೂಟರ್ ಪೇಟೆ ಇದರ ಧರ್ಮದರ್ಶಿ ಜನಾರ್ಧನ್ ಸೂಟರಪೇಟೆ. ಸಮಿತಿಯ ಅಧ್ಯಕ್ಷರಾದ ರಾಮದಾಸ್ ಪಾಂಡೇಶ್ವರ್. ಉಪಾಧ್ಯಕ್ಷರಾದ ಯಾದವ ಅತ್ತಾವರ. ಪ್ರಧಾನ ಕಾರ್ಯದರ್ಶಿ ದಿನೇಶ್. ಪಿ. ಎಸ್.ಹಿರಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮವು ದೇವರಿಗೆ ಪೂಜೆ ಯೊಂದಿಗೆ ಪ್ರಾರಂಭ ಗೊಂಡು. ಅತಿಥಿ ಗಳು ದೀಪೋದ್ಘಾಟನೆ ಮಾಡಿದರು. ಸಭಾ ಕಾರ್ಯಕ್ರಮವು ಪ್ರಶಾಂತ್ ಕಂಕನಾಡಿಯವರು ಪ್ರಾರ್ಥನೆ ಯೊಂದಿಗೆ ಪ್ರಾರಂಭಿಸಿದರು.ಈ 2 ಹಾಡುಗಳ ಗೀತೆಯ ಸಾಹಿತ್ಯ,ರಚನೆಯನ್ನು ಹಿರಿಯ ನಾಟಕ
ಗಾರರಾದ ರಾಮದಾಸ್ ಪಾಂಡೇಶ್ವರ್ ರಚಿಸಿ, ಸಂಗೀತ ನಿರ್ದೇಶನೆಯನ್ನು ಖ್ಯಾತ ಸಂಗೀತ ನಿರ್ದೇಶಕರಾದ ಎ. ಕೆ. ವಿಜಯ್ (ಕೋಕಿಲ ) , ಇದರ ನಿರ್ಮಾಣವನ್ನು ಪವನ್ ರಾಜ್ ಪೊಲೀಸ್ ಲೈನ್. ಪ್ರಶಾಂತ್ ಕಂಕನಾಡಿ. ವಿಶಾಲ್ ರಾಜ್ ಕೋಕಿಲ. ವಿನೋದ್ ರಾಜ್ ಕೋಕಿಲ, ಕು.ಕ್ಷಮ ಮಡಂತ್ಯಾರ್ . ಸಮಿತಿ ಸದಸ್ಯ ದಿನಕರ್ ಪಾಂಡೇಶ್ವರ್ ಇವರೆಲ್ಲರೂ ಈ 2 ಗೀತೆಯ ಹಾಡನ್ನು ಹಾಡಿರುತ್ತಾರೆ. ದಿನಾಂಕ 17 ರಂದು. ಎಸ್. ಜಿ. ಕ್ರಿಯೆಕ್ಷನ್ ಯು ಟ್ಯೂಬ್ ನಲ್ಲಿ ಈ 2 ಗೀತೆಗಳು ಬಿಡುಗಡೆ ಗೊಳ್ಳಲಿದೆ. ಅತಿಥಿ ಗಣ್ಯರು ಕಾರ್ಯಕ್ರಮಕ್ಕೆ ಹಾಗೂ ಬಿಡುಗಡೆ ಗೊಳ್ಳಲಿರುವ ಈ 2 ಗೀತೆಗಳ ಯಶಸ್ವಿ ಗಾಗಿ ಶುಭ ಹಾರೈಸಿದರು. ಪ್ರಧಾನ ಕಾರ್ಯದರ್ಶಿ ದಿನೇಶ್. ಪಿ. ಎಸ್ ಕಾರ್ಯಕ್ರಮ ನಿರೂಪಿಸಿ. ವಂದಿಸಿದರು.