ಕರ್ನಾಟಕ ಸರಕಾರ ಕೊಡಮಾಡುವ ಗಾಂಧಿ ಸೇವಾ ಪ್ರಶಸ್ತಿ ಪ್ರಕಟವಾಗಿದೆ. ಅಕ್ಟೋಬರ್ 2ರಂದು 5 ಲಕ್ಷ ರೂಪಾಯಿ ನಗದು ಸಹಿತದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

2020ರ ಸಾಲಿಗೆ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾತಿ ಮೀರಾಬಾಯಿ ಕೊಪ್ಪಿಕರ್, 2021ನೇ ಸಾಲಿಗೆ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಹಾಗೂ ಮಠವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನಿವೃತ್ತ ನ್ಯಾಯಾಧೀಶ ಅಶೋಕ್ ಬಂಗಾರೆಪ್ಪಾ ಪಂಚಗೇರಿ ಅಧ್ಯಕ್ಷತೆಯ ಸಮಿತಿ ಪ್ರಶಸ್ತಿ ಪ್ರಾಪ್ತಿಯವರನ್ನು ಗುರುತಿಸಿದೆ. ಕೊರೋನಾ ಕಾರಣ 2020ರಲ್ಲಿ ಪ್ರಶಸ್ತಿ ನೀಡಿರಲಿಲ್ಲ.