ಮಂಗಳೂರು:  ಫರಂಗಿಪೇಟೆಯ 28ರ ನಿಯಾಜ್, ತಲಪಾಡಿ ಕೆ. ಸಿ. ರಸ್ತೆಯ 31ರ ನಿಶಾದ್, ಪಡೀಲ್ ಕಣ್ಣೂರಿನ 24ರ ಮೊಹಮದ್ ರಜೀನ್‌ರನ್ನು ಮಾದಕ ವಸ್ತುಗಳ ಸಹಿತ, ಪಿಸ್ತೂಲು ಸಹಿತ ಮಂಗಳೂರು ಪೋಲೀಸರು ಬಂಧಿಸಿದ್ದಾರೆ. ಮೂವರ ಮೇಲೆ ಮೊದಲಿನಿಂದಲೂ ಹಲವು ಪ್ರಕರಣಗಳು ಇವೆ. 

ಇವರಿಂದ 9 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ಮಾದಕ ಮಾತ್ರೆ, 2 ಕಾರು, 4 ಮೊಬಾಯಿಲ್, 22,050 ನಗದು, ಜೀವಂತ ಗುಂಡುಗಳು ಇದ್ದ ಪಿಸ್ತೂಲು, 2 ಡ್ರ್ಯಾಗನ್ ಚಾಕು, ಡಿಜಿಟಲ್ ತೂಗು ಯಂತ್ರವನ್ನು ಅಪರಾಧ ವಿಭಾಗದ ಪೋಲೀಸರು ವಶಪಡಿಸಿಕೊಂಡಿದ್ದಾರೆ.