ಬೆಳ್ತಂಗಡಿ ತಾಲೂಕಿನ ಉಜಿರೆ ಓಡಲ ಮೂಲದ ಕೆಎಎಸ್ ಅಧಿಕಾರಿ ಶೇಖ್ ಲತೀಫ್ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯದ ನಾನಾ ಇಲಾಖೆಗಳಲ್ಲಿ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಇವರು ದಿಲ್ಲಿಯ ಸೆಕ್ರೆಟರಿ ಇಂಡಿಯಾ ಫೆಲೋ ಸದಸ್ಯತ್ವ ಪಡೆದಿರುವ ಕೆಲವೇ ಕೆಲವು ಅಧಿಕಾರಿಗಳಲ್ಲಿ ಒಬ್ಬರು.

ಮಂಗಳೂರಿನಲ್ಲಿ ಚಿನ್ನದ ಪದಕದೊಡನೆ ಎಂಬಿಎ ಮಾಡಿರುವ ಲತೀಫ್ ಅವರು ವಿಶ್ವವಿದ್ಯಾಲಯದ ತಂಡದಲ್ಲಿದ್ದು 800 ಮೀಟರ್ ಚಿನ್ನದ ಪದಕದ ಸಹಿತ ಹಲವು ಪದಕ ಗೆದ್ದಿದ್ದಾರೆ. ಓಡಲದ ರಶೀದಾಬಿ ಶೇಕ್ ಫಕೀರ್ ಸಾಹೇಬ್ ದಂಪತಿಯ ಮಗ ಇವರು.