ಜಮ್ಮು ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಚಿಮ್ಮರ್‌ ಗ್ರಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರ ಉಗ್ರರನ್ನು ಪೋಲೀಸರು ಎನ್‌ಕೌಂಟರ್ ಮಾಡಿ ಕೊಂದು ಕಳೆದರು ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬುಧವಾರ ಜಾವದ 2.30ರಲ್ಲಿ ಪೋಲೀಸರು ಖಚಿತ ಮಾಹಿತಿಯೊಡನೆ ಚಿಮ್ಮರ್‌ನಲ್ಲಿ ಅವರನ್ನು ಸುತ್ತುವರಿದರು. ಪೋಲೀಸು ಗುಂಡಿಗೆ ಆಹಾರವಾದವರನ್ನು ಕುಲ್ಗಾಂನ ವಸೀಂ ಅಹ್ಮದ್ ಬಂಗ್ರೂ, ಶೋಪಿಯಾನ್‌ನ ಶಾನವಾಜ್ ಅಹ್ಮದ್, ಚಿಮ್ಮರ್‌ನ ಜಾಕೀರ್ ಬಶೀರ್ ಎಂದು ಗುರುತಿಸಲಾಗಿದೆ.