ದೆಹಲಿಯಲ್ಲಿ ಸೋಮವಾರದಿಂದ ಬಿಸಿ ಗಾಳಿ ದಾಳಿ ನಡೆದಿದ್ದು, ಬುಧವಾರ ಈ ವರುಷದ ಗರಿಷ್ಠ ತಾಪಮಾನ 43.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಪ್ರತಿ ವರುಷ ಜೂನ್ 20ರ ಸುತ್ತಿನಲ್ಲಿ ದೆಹಲಿಯಲ್ಲಿ ಬಿಸಿ ಗಾಳಿಯ ರಭಸದ ಸುತ್ತಾಟ ಇರುತ್ತದೆ. ಈ ವರುಷ ಮುಂಗಾರು ತಡವಾದುದರಿಂದ ಇನ್ನೂ ಕೆಲ ದಿನ ಬಿಸಿ ಗಾಳಿಯ ಕಾಟ ಇರುತ್ತದೆ ಎಂದು ಐಎಂಡಿ- ಭಾರತದ ಹವಾಮಾನ ಇಲಾಖೆಯ ಅಧಿಕಾರಿ ಕುಲ್ದೀಪ್ ಶ್ರೀವಾತ್ಸವ ತಿಳಿಸಿದ್ದಾರೆ.