ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಶನಿವಾರದಿಂದ ಪ್ರಾರಂಭವಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪುತ್ತಿಗೆ ಸೋಮನಾಥೇಶ್ವರ, ಮಹಿಷಮರ್ದಿನಿ ಅಮ್ಮನವರ ಸನ್ನಿಧಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಕಲಶ ಪ್ರತಿಷ್ಠಾಪನೆಗಳು ಜರುಗಿದೆ. ನಿನ್ನೆ ಶ್ರೀ ಸೋಮನಾಥ ದೇವರ ಲಿಂಗ ಪ್ರತಿಷ್ಠೆ ನಡೆಯಿತು. ಇಂದು ಶ್ರೀಮಹಿಷಮರ್ದಿನಿ ಅಮ್ಮನವರ ಬಿಂಬ ಪ್ರತಿಷ್ಠಾಪನೆ ಕೂಡ ಸಂಪನ್ನಗೊಂಡಿತು. ಅಷ್ಟ ಬಂಧ ಲೇಪನ, ನಿದ್ರಾ ಕುಂಭಾಭಿಷೇಕ, ಪರಿವಾರ ದೇವರುಗಳ ಪ್ರತಿಷ್ಠೆ, ಹೋಮ, ಹವನ, ಇತ್ಯಾದಿಗಳು ಜರುಗುತ್ತಿವೆ.
ದೇವಳದ ಅನುವಂಶೀಯ ಆಡಳಿತ ಮುಕ್ತೇಸರ ಚೌಟರ ಅರಮನೆಯ ಕುಲದೀಪ್ ಎಂ, ಬ್ರಹ್ಮ ಕಲಶ ಸಮಿತಿಯ ಪದಾಧಿಕಾರಿಗಳಾದ ಪಿ ಅನಂತ ಕೃಷ್ಣ ಭಟ್, ನೀಲೇಶ್ ಶೆಟ್ಟಿ, ಸಂದೀಪ್ ಶೆಟ್ಟಿ, ದಯಾನಂದ ಶೆಟ್ಟಿ, ಸುನಿಲ್ ಕುಮಾರ್, ಸುಭಾಷ್ ದೇವಾಡಿಗ, ದಯಾನಂದ ದೇವಾಡಿಗ, ಗೀತ ದಯಾನಂದ ದೇವಾಡಿಗ, ಮಧ್ವರಾಜ ಶೆಟ್ಟಿ, ಶಿವಪ್ರಸಾದ್ ಆಚಾರ್ಯ, ವಿದ್ಯಾ ರಮೇಶ್ ಭಟ್, ಇತ್ಯಾದಿಯರು ವಿವಿಧ ಕಾರ್ಯಕ್ರಮಗಳ ಉಸ್ತುವಾರಿಯಲ್ಲಿ ಸಹಕರಿಸುತ್ತಿದ್ದರು.