ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅನುಕುಮಾರ್ ಬಂಧನ ಕೇಳಿ ಅವರ ತಂದೆ 60ರ ಚಂದ್ರಪ್ಪ ಅವರು ಚಿತ್ರದುರ್ಗದ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.

7ನೇ ಆರೋಪಿ ಅನು ಅಲಿಯಾಸ್ ಅನುಕುಮಾರ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಾರಿ ಪಟ್ಟಿಯಲ್ಲಿ ಇದ್ದ.‌ ಶುಕ್ರವಾರ ಆತ ಶರಣಾಗಿದ್ದಾನೆ. ಇದನ್ನು ‌ಕೇಳಿದ ಚಂದ್ರಪ್ಪ ನನ್ನ ಮಗ ಕೊಲೆಗಾರನಲ್ಲ ಎಂದು ಭೂಮಿಗೆ ಕುಸಿದಿದ್ದಾರೆ; ಹಲುಬಿದ್ದಾರೆ. ಚಿತ್ರದುರ್ಗದ ಸಿಹಿನೀರಿನ ಹೊಂಡದ ಬಳಿಯ ಮನೆಯಲ್ಲಿ ಚಂದ್ರಪ್ಪ ಕೆಲವೇ ಹೊತ್ತಿನಲ್ಲಿ ಎದೆ ಹಿಡಿದುಕೊಂಡು ಸಾವು ಕಂಡಿದ್ದಾರೆ.