ಯಾವುದೇ ಗ್ಯಾರಂಟಿ ರದ್ದಾಗುವುದಿಲ್ಲ. ಚುನಾವಣಾ ನೀತಿ ಸಂಹಿತೆಯ ಕಾರಣಕ್ಕೆ ತಡವಾಗಿದ್ದ ಎರಡು ಕಂತುಗಳ ಗೃಹಲಕ್ಷ್ಮಿ ಹಣ ಜೂನ್ 3ನೇ ನಿಮ್ಮ ಖಾತೆಗೆ ಬಂದಿರುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

11 ಮತ್ತು 12ನೇ ಕಂತಿನ ತಲಾ 2 ಸಾವಿರ ಸೇರಿ 4,000 ರೂಪಾಯಿ ಬಿಡುಗಡೆ ಆಗಿದೆ. ಆಧಾರ್ ಅಪ್ಡೇಟ್, ಪಡಿತರ ಚೀಟಿ ಇಕೆವೈಸಿ ಆಗದವರಿಗೆ ಹಣ ಸಿಗುವುದಿಲ್ಲ. ಸರಿಯಾದ ವ್ಯವಸ್ಥೆ ಮಾಡಿಕೊಳ್ಳಿ. ಗೃಹಲಕ್ಷ್ಮಿ ಹಣಕ್ಕಾಗಿ ಹೊಸತಾಗಿ ಕೂಡ ಅರ್ಜಿ ಸಲ್ಲಿಸಬಹುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ತೃತೀಯ ಲಿಂಗಗಳು ಕೂಡ ಈ ಗ್ಯಾರಂಟಿ ಪಡೆಯಲು ಅವಕಾಶ ಇದೆ.