ಮಂಗಳೂರು: ಮಿಲಾಗ್ರಿಸ್ ಕಾಲೇಜು ಮಂಗಳೂರಿನ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ಕಾಲೇಜಿನ ಐಕ್ಯೂಎಸಿ ವಿಭಾಗ ಹಾಗೂ ಮಾನವ ಸಂಪತ್ತು ಅಭಿವೃದ್ಧಿ ಘಟಕದ ಸಹಯೋಗದಲ್ಲಿ ಸಂಶೋಧನಾ ಅಭಿವೃದ್ಧಿ ಕುರಿತ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಮೈಕೆಲ್ ಎಲ್ ಸಾಂತುಮಯೋರ್ ನೆರವೇರಿಸಿ ಮಾತನಾಡಿ ಶಿಕ್ಷಣದಲ್ಲಿ ಸಂಶೋಧನೆ ಒಂದು ಪ್ರಮುಖ ಭಾಗ. ಅಧ್ಯಾಪಕರು ನಿರಂತರವಾದ ಸಂಶೋಧನೆಯಲ್ಲಿ ತೊಡಗಿದಾಗ ವಿದ್ಯಾರ್ಥಿಗಳಿಗೆ ಗುಣಮಟ್ಟದ ಜ್ಞಾನವನ್ನು ಒದಗಿಸುವುದಕ್ಕೆ ಸಾಧ್ಯ. ನಿಟ್ಟಿನಲ್ಲಿ ಇಂತಹ ಕಾರ್ಯಗಾರ ಅಧ್ಯಾಪಕರಿಗೆ ಸಂಶೋಧನಾ ಜ್ಞಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದರು.
ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಯೆನಪೋಯ ವಿಶ್ವವಿದ್ಯಾಲಯ ಮಂಗಳೂರು ಇಲ್ಲಿನ ಸಹಾಯಕ ಪ್ರಾಧ್ಯಾಪಕರುಗಳಾಗಿರುವ ಡಾ. ನಿಯಾಜ್ ಪನಕಜೆ ಹಾಗೂ ಡಾ. ಎಸ್. ಎಂ. ರಿಹಾ ಪರ್ವಿನ್ ಭಾಗವಹಿಸಿದ್ದರು.
ಸಂಶೋಧನೆಯ ಮಹತ್ವ, ಗುಣಮಟ್ಟದ ಅಧ್ಯಯನ ಕ್ರಮ, ಮತ್ತು ವೈಜ್ಞಾನಿಕ ಸಂಶೋಧನಾ ವಿಧಾನಗಳ ಕುರಿತು ಉಪನ್ಯಾಸಗಳು ನಡೆದವು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ವಿಭಾಗದ ಸಂಯೋಜಕರಾದ ಚೇತನ ಕುಮಾರಿ, ಕಾಲೇಜಿನ ಸಂಶೋಧನಾ ಘಟಕದ ಸಂಯೋಜಕರಾದ ಡಾ. ಆಶಾ ಜ್ಯೋತಿ ಹಾಗೂ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.