ಮಂಗಳೂರು:  ಲಿಯೋ ಚಾರಿಟೇಬಲ್ ಟ್ರಸ್ಟ್ (ರಿ) ತನ್ನ ಕೋಂಕಣಿ ಮ್ಯೂಸಿಕಲ್ ಧಮಾಕಾ-99 ವರ್ಚುವಲ್ ಮ್ಯೂಸಿಕಲ್ ಕನ್ಸರ್ಟ್ ಕಾರ್ಯಕ್ರಮವನ್ನು ರವಿವಾರ ಸಂಝೆ ಮಂಗಳೂರು ಸಂದೇಶ ಕಲಾ ಕೇಂದ್ರ ಸಭಾಗೃಹದಲ್ಲಿ ಅಯೋಜಿಸಿತ್ತು. 

ಇನ್ಫೆಂಟ್ ಮೇರಿ ಚರ್ಚ್ ಬಜ್ಜೋಡಿ ಇದರ ಧರ್ಮಗುರು ರೆ|ಫಾ| ಡೊಮಿನಿಕ್ ವಾಸ್ ಇವರ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಂತರಾಷ್ಟ್ರೀಯ ಪ್ರಸಿದ್ಧ ಗಾಯಕಿ ಕೊಂಕಣಿ ಮೈನಾ ಬಿರುದಾಂಕಿತ ವಿೂನಾ ವಿಲ್ಫಿ ರೆಬಿಂಬಸ್ ಇವರಿಗೆ ಮಿಲೇನಿಯಂ ಮೈನಾ ಬಿರುದುನ್ನು ಪ್ರದಾನಿಸಿ ಗೌರವಿಸಿದರು. 

ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರಾಗಿ  ಫಾರ್ಚೂನ್ ಲೈಫ್ ವೆಲ್ತ್ ಪ್ರೈವೇಟ್ ಲಿಮಿಟೆಡ್ ದೆಹಲಿಯ ನಿರ್ದೇಶಕ ಮತ್ತು ಪಿಟಿಐ ಕನ್ಸಲ್‍ಟೆ ಮಾಲೀಕ ಜೋಸೆಫ್ ಎಲಿಯಾಸ್ ಮೀನೆಜಸ್,  ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ  ಅಧ್ಯಕ್ಷ ರೋನ್ಸ್ ಬಂಟ್ವಾಳ್, ಸೂಕ್ತ ಮೀಡಿಯಾ ನೆಟ್‍ವರ್ಕ್ ವ್ಯವಸ್ಥಾಪಕ ನಿರ್ದೇಶಕ ಜೋನ್ ವಿಲ್ಸನ್ ಲೋಬೋ , ಕೊಂಕಣಿ ನಾಟಕ ಕಥೆಗಾರ, ನಟ, ನಿರ್ದೇಶಕ ಮತ್ತು ಕಾಮಿಡಿ ಕಿಂಗ್ ಫ್ರಾನ್ಸಿಸ್ ಫೆರ್ನಾಂಡಿಸ್ ಉಪಸ್ಥಿತರಿದ್ದು, ಶಾಲು ಹೊದಿಸಿ, ಮೈಸೂರು ಪೇಟಾ ತೊಡಿಸಿ, ಫಲಪುಷ್ಪ, ಪ್ರಶಸ್ತಿ ಫಲಕವನ್ನಿತ್ತು ಗೌರವಿಸಿದರು. ಈ ಸಂದರ್ಭದಲ್ಲಿ ಲಿಯೋ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಮತ್ತು ಟ್ರಸ್ಟಿ ಲಿಯೋ ರಾಣಿಪುರ, ಸಂಯೋಜಕ ಸ್ಟ್ಯಾನಿ ಬಂಟ್ವಾಳ್, ಜೊತೆ ಕಾರ್ಯದರ್ಶಿ ನ್ಯಾ| ಅಲ್ವಿನ್ ಪ್ರಶಾಂತ್ ಮೊಂತೇರೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಹೆಸರಾಂತ ಸಂಗೀತಗಾರರಾದ ಲ್ಯಾನ್ಸಿ ಹೆನ್ರ್ರಿ ಮೊರಾಸ್, ಡೊಲ್ಲಾ ಮಂಗಳೂರು, ಜೆರಿ ಬೊಂದೆಲ್ ಇವರಿಗೆ ವಿಶೇಷವಾಗಿ ಗೌರವಿಸಲಾಯಿತು. 

ಸುನೀಲ್ ಮೊಂತೆರೋ, ಸೋನಾಲ್ ಮೊಂತೆರೋ ಮತ್ತು ಸಿಮೋನ್ ಮೊಂತೆರೋ ಪ್ರಾರ್ಥನೆ ಗೀತೆಯನ್ನಾಡಿದರು. ಕಾರ್ಯದರ್ಶಿ ಲಿಸ್ಟನ್ ಡಿಸೋಜಾ ಸ್ವಾಗತಿಸಿದರು. ಕೋಶಾಧಿಕಾರಿ ರೋಶನ್ ಕ್ರಾಸ್ತಾ ಪುರಸ್ಕೃತರನ್ನು ಪರಿಚಯಿಸಿ ಅಭಿನಂದನಾ ಪತ್ರ ವಾಚಿಸಿದರು. ಪ್ರಿತೇಶ್ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು. ರವಿರಾಜ್ ಡಿಸೋಜಾ ಧನ್ಯವಾದಿಸಿದರು.