ರಾಮ ಮಂದಿರ ಟ್ರಸ್ಟ್ ಮಾಡಿಕೊಂಡಿರುವ ನಿಯಮದಂತೆ ರಾಹುಲ್ ಗಾಂಧಿಯವರು ಮತ್ತು ಪ್ರಿಯಾಂಕಾ ಗಾಂಧಿಯವರು ರಾಮ ಮಂದಿರ ಉದ್ಘಾಟನೆಯ ಕರೆಯೋಲೆ ಪಡೆಯಲು ಅರ್ಹರಲ್ಲ ಎಂದು ಟ್ರಸ್ಟ್ ಹೇಳಿದೆ.

ಟ್ರಸ್ಟ್‌ನ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಪ್ರತಿ ಪಕ್ಷಗಳ ನಾಯಕಿ ಆಗಿರುವ ಸೋನಿಯಾ ಗಾಂಧಿಯವರಿಗೆ ಆಹ್ವಾನ ನೀಡಿದ್ದಾರೆ. ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆಯವರಿಗೆ ಕರೆಯೋಲೆ ನೀಡಿದ್ದಾರೆ. ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಅವರಿಗೂ ಕರೆಯೋಲೆ ನೀಡಲಾಗಿದೆ ಎನ್ನಲಾಗಿದೆ. ಇತರ ಪಕ್ಷಗಳು, ಉದ್ಯಮಿ ದಾನಿಗಳು, ರಾಮ ಮಂದಿರ ಹೋರಾಟದ ನಾಯಕರು ಎಂದು ನಿಯಮಾವಳಿ ಪ್ರಕಾರ ಆಹ್ವಾನ ನೀಡಲಾಗಿದೆ. ರಾಹುಲ್, ಪ್ರಿಯಾಂಕಾ ಗಾಂಧಿಯವರು ಈ ನಿಯಮಾವಳಿಯಲ್ಲಿ ಬರುವುದಿಲ್ಲ ಎಂದು ಟ್ರಸ್ಟ್ ಪರ ಹೇಳಿಕೆ ನೀಡಲಾಗಿದೆ.