ಭಾರತದ ವಯೊಲಿನ್ ವಾದಕಿ ಜ್ಯೋತ್ಸ್ನಾ ಶ್ರೀಕಾಂತ್ ಅವರಿಗೆ ಬ್ರಿಟನ್ನಿನ ಮೂರನೆಯ ಅತ್ಯುನ್ನತ ಪ್ರಶಸ್ತಿಯಾದ ಮೆಂಬರ್ ಆಫ್ ದ ಆರ್ಡರ್ ಆಫ್ ದ ಬ್ರಿಟಿಷ್ ಎಂಪೈರ್ ಪ್ರದಾನ ಮಾಡಲಾಗಿದೆ.

ರಾಜಮನೆತನದ‌ ವಿಂಡ್ಸರ್ ಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಸು ಮೂರನೆಯ ‌ಚಾರ್ಲ್ಸ್ ಪ್ರಶಸ್ತಿ ನೀಡಿ ಗೌರವಿಸಿದರು.