ಮಂಗಳೂರು ನ 17 : ಪೀಪಲ್ಸ್  ಫೋರಮ್ ಆಫ್ ಕರ್ನಾಟಕ  ಎಜ್ಯುಕೇಶನ್‍ ಕರ್ನಾಟಕ ರಾಜ್ಯದ 25 ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳುಗಳ ಕಾಲರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣದಲ್ಲಿ ಮುಂದುವರಿಸುವುದು ಹಾಗೂ ಶಾಲಾ ಶಿಕ್ಷಣದಲ್ಲಿ ಜಾರಿಗೊಳಿಸುವಂತೆ ಶಿಕ್ಷಣ ತಜ್ಞರ ಸಭೆಯನ್ನು ನಡೆಸಿ ರಾಜ್ಯದ ಶಿಕ್ಷಣ ತಜ್ಞರ ಅಭಿಪ್ರಾಯವನ್ನು ಪಡೆದಿರುತ್ತದೆ. ಕರ್ನಾಟಕ ರಾಜ್ಯ ಸರ್ಕಾರ ರಾಜ್ಯ ಶಿಕ್ಷಣ ನೀತಿಯನ್ನು ರಚನೆ ಮಾಡಲು ಹೊರಟಿರುವುದು ರಾಜಕೀಯ ಪ್ರೇರಿತವಾಗಿರುವ ಅಜೆಂಡಾವಾಗಿರುತ್ತದೆ ಎಂಬುವುದು ರಾಜ್ಯದ ಶಿಕ್ಷಣ ತಜ್ಞರ ಅಭಿಪ್ರಾಯವಾಗಿರುತ್ತದೆ. 

ರಾಷ್ಡ್ರೀಯ ಶಿಕ್ಷಣ ನೀತಿಯನ್ನು ಓದದೆ ಇದರ ಸಾಧಕ-ಭಾದಕಗಳ ಬಗ್ಗೆ ಚರ್ಚೆ ನಡೆಸದೆ ಯಾವ ರೀತಿಯಲ್ಲಿ ರಾಷ್ಡ್ರೀಯ ಶಿಕ್ಷಣ ನೀತಿ ಅಸಮರ್ಪಕವಾಗಿದೆ ಎಂಬುವುದನ್ನು ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳ ಮುಂದಿಡದೆ ಕಾಂಗ್ರೇಸ್ ನೇತ್ರುತ್ವದ ರಾಜ್ಯ ಸರ್ಕಾರ ವಿರೋಧ ಮಾಡುತ್ತಿರುವುದು ಎನ್‍ಇಪಿಯ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರ ಮಧ್ಯೆಗೊಂದಲ ನಿರ್ಮಾಣವಾಗಿದೆ. ರಾಜ್ಯ ಶಿಕ್ಷಣ ನೀತಿಯ ಸಮಿತಿಯಲ್ಲಿ ಬಹುತೇಕ ಎಡ ಚಿಂತನೆಗಳು ಇರುವುದು ರಾಜಕೀಯ ಪ್ರೇರಿತವಾಗಿರುವ ನೀತಿಯನ್ನು ರಚನೆ ಮಾಡುವ ಉದ್ದೇಶ ಎಂಬುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಪೀಪಲ್ಸ್ ಫೋರಮ್ ಆಫ್ ಕರ್ನಾಟಕ  ಎಜ್ಯಕೇಶನ್‍ ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಪರವಾಗಿ ಒಂದು ಕೋಟಿ ಸಹಿ ಸಂಗ್ರಹದ ಗುರಿಯನ್ನು ಇಟ್ಟುಕೊಂಡು ನವೆಂಬರ್ 15 ರಿಂದ ಸಹಿ ಸಂಗ್ರಹ ಅಭಿಯಾನವನ್ನು ಕೈಗೊಂಡಿರುತ್ತದೆ. ದ.ಕ ಜಿಲ್ಲೆಯಲ್ಲಿ ಈ ಸಹಿ ಸಂಗ್ರಹ ಅಭಿಯಾನಕ್ಕೆ ವಿವಿಧ ಸಂಘಟನೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. 

ಈ ಸಹಿ ಸಂಗ್ರಹ ಅಭಿಯಾನಕ್ಕೆ ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ವಿದ್ಯಾ ಭಾರತಿ ಕರ್ನಾಟಕ, ಮಾಧ್ಯಮಿಕ ಶಿಕ್ಷಕ ಸಂಘ, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಸಂಸ್ಕ್ರತ ಭಾರತಿ ಬೆಂಬಲವನ್ನು ಸೂಚಿಸಿರುತ್ತದೆ. ಈ ಸಂಘಟನೆ ಅವರ ಸಂಘಟನೆಯ ನೇತ್ರುತ್ವದಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿರುತ್ತದೆ. ಈ ಎಲ್ಲಾ ಸಂಘಟನೆಗಳು ಸಹಿ ಸಂಗ್ರಹವಾದ ಬಳಿಕ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಈ ಸಹಿಯ ಮನವಿ ಪತ್ರವನ್ನು ಸಲ್ಲಿಸಲಿದ್ದಾರೆ ಎಂದು ಪೀಪಲ್ಸ್ ಫೋರಮ್ ಆಫ್ ಕರ್ನಾಟಕ ಎಜ್ಯುಕೇಶನ್‍ನ ವಿಭಾಗ ಸಂಚಾಲಕ ರಮೇಶ್ ಕೆ ತಿಳಿಸಿದ್ದಾರೆ.