ಶುಕ್ರವಾರ ಗೋವರ್ಧನ ಪೂಜೆಯಲ್ಲಿ ಭಾಗವಹಿಸಿದ ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ರಾಜ್ಯದ ಒಳಿತು ಬಯಸಿ ಸಾಂಪ್ರದಾಯಿಕ ಛಾಟಿಯೇಟು ತಿಂದರು.
ಶುಕ್ರವಾರ ಎಲ್ಲ ಕಡೆ ಗೋವರ್ಧನ ಪೂಜೆಯ ಸಂಭ್ರಮ. ದುರ್ಗಾ ಜಿಲ್ಲೆಯ ಹಳ್ಳಿಯೊಂದರ ಈ ಪೂಜೆಯಲ್ಲಿ ಭಾಗವಹಿಸಿದ ಅವರು ಹುಲ್ಲುಗಳಿಂದ ಮಾಡಿದ ಛಾಟಿಯಿಂದ ಎಂಟು ಏಟು ತಿಂದರು. ಇದರಿಂದ ಒಳಿತಾಗುತ್ತದೆ ಎಂಬುದು ನಂಬಿಕೆ.