ವರದಿ ರಾಯಿ ರಾಜಕುಮಾರ್

ಪಡುಮಾರ್ನಾಡು ಗ್ರಾಮದ ಬಸವನ ಕಜೆ ಫ್ರೆಂಡ್ಸ್ ಸರ್ಕಲ್ ವತಿಯಿಂದ ದ್ವಿತೀಯ ವರ್ಷದ ದಸರಾ ಕ್ರೀಡಾಕೂಟ ನಡೆಯಿತು. 

ಅಂಗನವಾಡಿ ಮಕ್ಕಳಿಗೆ ಕಪ್ಪೆ ಜಿಗಿತ ಮತ್ತು ಓಟ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಓಟ, ಮಡಿಕೆ ಒಡೆಯುವುದು, ಭಕ್ತಿ ಗೀತೆ, ಸಂಗೀತ ಕುರ್ಚಿ, ಕಾಲೇಜು ಹಾಗೂ ಸಾರ್ವಜನಿಕರಿಗೆ ಗೋಣಿಚೀಲ ಓಟ, ಹಗ್ಗ ಜಗ್ಗಾಟ, ಭಕ್ತಿ ಗೀತೆ ಇತ್ಯಾದಿ ಸ್ಪರ್ಧೆಗಳು ನಡೆದವು. ಜೈ ಭೀಮ್ ನ ರಾಜ್ಯಾಧ್ಯಕ್ಷ ವರ್ತೂರು ಮಂಜುನಾಥ್, ಅರಣ್ಯ ಇಲಾಖೆಯ ಕಿರಣ್ ಕುಮಾರ್ ಮುಖ್ಯ ಅತಿಥಿಗಳಾಗಿ ಹಾಜರಿದ್ದರು. ಬಸವನ ಕಜೆಯ ಉಮೇಶ್, ಸುಧೀರ್ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.