ಕಿನ್ನಿಗೋಳಿ:  ಪಂಚಾಯತ್‌ ಮೇಲ್ದರ್ಜೆಗೇರಿದ ಬಳಿಕ ಸಾಕಷ್ಟು ಅಭಿವೃದ್ದಿ ಕೆಲಸ ಆಗಿದೆ, ಕಳೆದ ನಾಲ್ಕುವರೆ ವರ್ಷ ಅವಧಿಯಲ್ಲಿ ಸಾವಿರದ ಎಂಟುನೂರು ಕೋಟಿ ಅನುದಾನ ತರಲಾಗಿದ್ದು ಜಾತಿ ಮತ ಭೇದ ವಿಲ್ಲದೆ ಕೆಲಸಗಳು ನಡೆದಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು. 

ಅವರು. ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಗುತ್ತಕಾಡು ಗುರುನಾರಾಯಣ ಮಂದಿರದ ಬಳಿ ಸುಮಾರು 22.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ವಾಣಿಜ್ಯ ಕಟ್ಟಡ ಮತ್ತು ವ್ಯಾಯಾಮ ಶಾಲೆಯ ಉದ್ಭಾಟನೆ ನೆರವೇರಿಸಿ ಮಾತನಾಡಿದರು.

ಈ ಸಂದರ್ಭ ಧರ್ಮದರ್ಶಿ ವಿವೇಕಾನಂದ, ಧಾರ್ಮಿಕ ಪರಿಷತ್‌ ಸದಸ್ಯ ಭುವನಾಭಿರಾಮ ಉಡುಪ, ಇಂಜಿನೀಯರ್‌ ನಾಗರಾಜ್‌, ದಿವಾಕರ ಕರ್ಕೇರ, ಸಂತಾನ್‌ ಡಿಸೋಜ, ಅರುಣ್‌ ಸಾಲಿಯಾನ್‌, ಸಂತೋಷ್‌ ಕಿನ್ನಿಗೋಳಿ ಅಬ್ದುಲ್‌ ಖಾದರ್‌ ಗುತ್ತಿಗೆದಾರ ಶ್ರೀಧರ್‌ ಬಾಳ , ಹನೀಫ,ಪಂಚಾಯತ್‌ ಮುಖ್ಯಾಧಿಕಾರಿ ಸಾಯಿಶ್‌ ಚೌಟ ಮತ್ತಿತರರು ಉಪಸ್ಥಿತರಿದ್ದರು.