ಸುರತ್ಕಲ್ ಪೋಲೀಸು ಠಾಣೆ ವ್ಯಾಪ್ತಿಯ ಚಿತ್ರಾಪುರದಲ್ಲಿ ಬಸ್ ನಿಲುಗಡೆಯ ಕಟಕಟೆಗೆ ಸ್ಕೂಟರ್ ಗುದ್ದಿದ್ದರಿಂದ ಎತ್ತಿ ಎಸೆಯಲ್ಪಟ್ಟ ಸವಾರ ಸ್ಥಳದಲ್ಲೇ ಸಾವು ಕಂಡಿರುವ ಘಟನೆಯು ಬುಧವಾರ ನಡೆದಿದೆ.

ಮಂಗಳೂರು ಸುತ್ತಿ ಸುರತ್ಕಲ್ಲಿಗೆ ಹೊರಟಿದ್ದ ಸವಾರ ವೆಂಕಟೇಶ್ ತನ್ನ ನಿರ್ಲಕ್ಷ್ಯದ ಚಾಲನೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಅವರ ಮುಖ ಮತ್ತು ಕಣ್ಣಿನ ಭಾಗ ತೀವ್ರ ಗಾಯಗೊಂಡು, ಭಾರೀ ರಕ್ತ ಹರಿದಿತ್ತು.