ಮಂಗಳೂರು:  ಕ್ಯಾಥೊಲಿಕ್ ಧರ್ಮ ಪ್ರಾಂತ್ಯದ ಬಿಶಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಬ್ರಹ್ಮರ್ಷಿ ನಾರಾಯಣ ಗುರುಗಳ ಸಂದೇಶಗಳ ಶ್ಲಾಘನೆ ಮಾಡಿದರು.

ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ನಾರಾಯಣ ಗುರುಗಳು ನೀಡಿದ ಜಾಗತಿಕ ಸಂದೇಶವಾಗಿದೆ. ಮಂಗಳೂರು ದಸರಾ ಇಂದು ಸರ್ವ ಧರ್ಮಗಳ ಉತ್ಸವದ ರೂಪ ಪಡೆದಿದೆ. ಮೈಸೂರು ದಸರಾದ ಬಳಿಕದ ಖ್ಯಾತಿಯನ್ನು ಸಹ ಮಂಗಳೂರು ದಸರಾ ಪಡೆದಿದೆ. ಇದು ಸರ್ವ ಜನ ಮೇಳ ಎಂದು ಬಿಶಪ್ ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕದ ವಿಧಾನ ಸಭಾ ಸ್ಪೀಕರ್ ಯು. ಟಿ. ಖಾದರ್ ಹಾಜರಿದ್ದು ಸರ್ವ ಧರ್ಮ ಸೌಹಾರ್ದ ಭೇಟಿಗೆ ಮಹತ್ವ ಬರುವಂತೆ ಮಾಡಿದರು.  ಬಿಶಪ್ ಸಲ್ಡಾನ್ಹಾರ ಜೊತೆಗೆ ಬಿಶಪ್ ಮನೆ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟಲಿನೋ ಮೊದಲಾದವರು ಉಪಸ್ಥಿತರಿದ್ದರು.  ದೇವಾಲಯ ಮಂಡಳಿಯ ಪರವಾಗಿ ಪದ್ಮರಾಜ್, ಸಾಯಿರಾಂ, ಹರಿಕೃಷ್ಣ ಬಂಟ್ವಾಳ, ಮಾಧವ ಸುವರ್ಣ ಮೊದಲಾದವರು ಸ್ವಾಗತಿಸಿ ಬೀಳ್ಕೊಟ್ಟರು.