ಬಿಹಾರದ ನವಾಡ ಜಿಲ್ಲೆಯ ಸಿರ್ದಾಲ ಪೋಲೀಸು ಠಾಣೆಯ ವ್ಯಾಪ್ತಿಯಲ್ಲಿ ನರ್ಹತ್ ರಸ್ತೆಯಲ್ಲಿ ಸರಸ್ವತಿ ಪೂಜೆಗೆ ವಂತಿಗೆ ನೀಡಲಿಲ್ಲ ಎಂದು ಒಂದು ಯುವಕರ ಗುಂಪು ಗುದ್ದಿ ಕೊಂದಿದೆ. 

ಅಕ್ಬರ್ಪುರ ಪೋಲೀಸು ಠಾಣಾ ವ್ಯಾಪ್ತಿಯ ಅಸಾ ಬಿಘಾ ವಾಸಿ ರವೀಂದ್ರ ರಾಜವಂಶಿ ಕೊಲೆಯಾದ ಆಟೋ ಚಾಲಕ. ಈತನ ತಾಯಿ ಮಂಗಳವಾರ ತೀರಿಕೊಂಡಿದ್ದರು. ಮನೆಯವರನ್ನು ಸ್ನಾನಕ್ಕೆ ಕರೆದೊಯ್ದು ಹಿಂತಿರುಗುವಾಗ ಈ ಘಟನೆ ನಡೆದಿದೆ. 

ವಂತಿಗೆ ಕೇಳಿದ ಯುವಕರು ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಓಡಿ‌ಹೋಗಿದ್ದರು. ರವೀಂದ್ರರನ್ನು ಕುಟುಂಬದವರು ಆಸ್ಪತ್ರೆಗೆ ಒಯ್ದರೂ ಮೊದಲೇ ಪ್ರಾಣ ಹೋಗಿತ್ತು. ಪೋಲೀಸರು ಯುವಕರ ಹುಡುಕಾಟ ನಡೆಸಿದ್ದಾರೆ.