ಚಿತ್ರ / ವರದಿ : ರೋನ್ಸ್ ಬಂಟ್ವಾಳ್
ಮುಂಬಯಿ: ಕೊಂಕಣ್ ಅಸೋಸಿಯೇಶನ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯು ಈಸ್ಟರ್ ಹಬ್ಬದ ಪ್ರಯುಕ್ತ ಇಂದಿಲ್ಲಿ ಭಾನುವಾರ ಸಂಜೆ ಅಂಧೇರಿ ಪೂರ್ವದ ಮರೋಳ್ ಇಲ್ಲಿನ ವಿನ್ಸೆಂಟ್ ಪಲ್ಲೋಟ್ಟಿ ಇಗರ್ಜಿಯ ತೆರೆಸ್ ಮೈದಾನದಲ್ಲಿ ಕೊಂಕಣಿ ಸಂಗೀತ ಸಂಜೆಯಾಗಿಸಿ `ಕೊಂಕ್ಣಿ ದಬಾಜೊ' ಕಾರ್ಯಕ್ರಮ ಆಯೋಜಿಸಿದ್ದು ಧರ್ಮಗುರು ರೆ| ಫಾ| ಸಾಮ್ಯುವೆಲ್ ಅನುಗ್ರಹಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.
ಧರ್ಮಗುರು ರೆ| ಫಾ| ಸಾಮ್ಯುವೆಲ್, ಉದ್ಯಮಿಗಳಾದ ಪ್ರೇಮ್ ವಾಸ್, ಜ್ಯೋ ಲೋಬೊ, ಜೇಮ್ಸ್ ಲೋಬೊ, ಪಾವ್ಲ್ ಮಸ್ಕರೇನ್ಹಾಸ್, ದಿವೋ ಸಾಪ್ತಾಹಿಕದ ಸಂಪಾದಕ ಲಾರೇನ್ಸ್ ಕುವೆಲ್ಲೋ, ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷೆ ಬೆನ್ನಿ ಬಿ.ರೆಬೆಲ್ಲೋ, ಅಧ್ಯಕ್ಷ ವಾಲ್ಟರ್ ಡಿಸೋಜಾ ಜೆರಿಮೆರಿ, ಕಾರ್ಯದರ್ಶಿ ವಿನ್ಸೆಂಟ್ ಕಾಸ್ತೆಲಿನೋ ವೇದಿಕೆಯಲ್ಲಿದ್ದು ಜಾಗೃತಿ ಕೇಂದ್ರ ಜೆರಿಮೆರಿ ಇದರ ಭಗಿನಿ ಸಿ| ಸೀಮಾ, ಮೋಡೆಲ್ ಬ್ಯಾಂಕ್‍ನ ನಿರ್ದೇಶಕ ಕ್ಲೆಮೆಂಟ್ ಎ.ಲೋಬೊ, ಜೋಸೆಫ್ ಕ್ರಾಸ್ತಾ, ಮತ್ತು ಸ್ನೇಹಲಯ ಚ್ಯಾರಿಟೇಬಲ್ ಟ್ರಸ್ಟ್ (ಮಂಜೇಶ್ವರ) ಮಂಗಳೂರು ಇದರ ಸಂಸ್ಥಾಪಕ ಬ್ರ| ಜೋಸೆಫ್ ಕ್ರಾಸ್ತಾ ಇವರನ್ನು ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು. ಹಾಗೂ ಎಲ್ಲಾ ಕಲಾವಿದರಿಗೆ ಸತ್ಕರಿಸಿ ಅಭಿವಂದಿಸಿದರು
ಕೊಂಕಣ್ ಅಸೋಸಿಯೇಶನ್‍ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಅತಿಥಿüಗಳಿಗೆ ಪುಷ್ಫಗುಪ್ಚ ನೀಡಿ ಗೌರವಿಸಿದರು. ಸಿರಿಲ್ ಕಾಸ್ತೆಲಿನೋ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ಲಿಯೋ ಫೆರ್ನಾಂಡಿಸ್ ಜೆರಿಮೆರಿ ಸ್ವಾಗತಿಸಿ ಹಬ್ಬದ ಶುಭಾಶಯಗಳನ್ನಿತ್ತು ಆಭಾರ ಮನ್ನಿಸಿದರು.
ಮುಂಬಯಿಯಲ್ಲಿನ ಸಂಗೀತ ಕ್ಷೇತ್ರದ ಪ್ರತಿಭಾನ್ವಿತರಾದ ಆ್ಯಂಟನಿ ತಾವ್ರೊ, ವೆರೋನಿಕಾ ಡಿಸೋಜಾ, ಮಾನ್ಯುವೆಲ್ ಪಿ.ಫೆರ್ನಾಂಡಿಸ್, ಲೆವಿನ್ ಫೆರ್ನಾಂಡಿಸ್, ಆ್ಯಡ್ರಿಯಾ ಸುವಾರೆಸ್, ಪ್ರೀತಮ್ ಮಚಾದೋ, ಡಾ| ಅರುಣ್ ಕ್ರಾಸ್ತಾ, ಆಂಜೆಲಿನಾ ಡಿಸೋಜಾ, ಬ್ಲೆನಿ ಡಿಸೋಜಾ ಮತ್ತಿತರ ಗಾಯಕರು ಕೊಂಕಣಿ ಹಾಡುಗಳೊಂದಿಗೆ ಸಂಗೀತ ರಸಮಂಜರಿ ಸಾದರ ಪಡಿಸಿದರು.