ಮೂಡುಬಿದಿರೆ:  ಕೆ. ಎನ್. ಭಟ್ ಶಿರಾಡಿಪಾಲ್ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಶತನಮನ ಶತಸನ್ಮಾನ ಕಾರ್ಯಕ್ರಮದ 53 ಮತ್ತು 54ನೇ ಯ ಸನ್ಮಾನವನ್ನು ಮೂಡುಬಿದಿರೆ ಗಾಂಧಿನಗರದ ಶ್ರೀ ಧನಲಕ್ಷ್ಮಿ ಕ್ಯಾಶ್ಯೂ ಸಂಸ್ಥೆಯಲ್ಲಿ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಶತನಮನ ಶತಸನ್ಮಾನ ಕಾರ್ಯಕ್ರಮದ ಗೌರವ ಸಲಹೆಗಾರ  ಕೆ. ಶ್ರೀಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ  ಜರಗಿತು. 

ಸನ್ಮಾನ ಸರಣಿಯ 53ನೇ ಯ ಸನ್ಮಾನವನ್ನು ಜೈನ ಪ್ರೌಢಶಾಲೆಯ ಹಿಂದಿ ಶಿಕ್ಷಕ  ರಾಯೀ ರಾಜಕುಮಾರ್ ಹಾಗೂ 54ನೇ ಯ ಸನ್ಮಾನವನ್ನು ಖ್ಯಾತ ಪಾಕಶಾಸ್ತ್ರಜ್ಞ  ಅಶೋಕ್ ಭಟ್ ಪೆರಿಂಜೆ ಅವರಿಗೆ ನೀಡಿ ಗೌರವಿಸಲಾಯಿತು. ಕೆ.ಎನ್. ಭಟ್ ಶಿರಾಡಿಪಾಲ್ ಅವರ ಪುತ್ರಿ ಅನುಪಮಾ ಚಿಪ್ಳೂಣಕರ್, ಅಳಿಯ ಮುರಾರಿ ಚಿಪ್ಳೂಣಕರ್, ಹಿರಿಯರಾದ ಪ್ರಭಾಕರ ರಾವ್ ದಂಪತಿಗಳು, ಸಂಸ್ಥೆಯ ಪ್ರಬಂಧಕ ವೆಂಕಟೇಶ ಭಟ್ ಮತ್ತಿತರರು ಉಪಸ್ಥಿತರಿದ್ದರು. ದೀಪ್ತಿ ಬಾಲಕೃಷ್ಣ ಭಟ್ ಪ್ರಾರ್ಥಿಸಿದರು. ಶತನಮನ ಶತಸನ್ಮಾನ ಕಾರ್ಯಕ್ರಮದ ಸಂಘಟಕ ಕೃಷ್ಣಕುಮಾರ್ ಸ್ವಾಗತಿಸಿ ವಂದಿಸಿದರು.