ಬೆಂಗಳೂರು: ಮಾಜೀ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರ ವಿರುದ್ಧ ಬೆಂಗಳೂರು ಜಯನಗರ ಜಾಗೃತ ದಳ ಪೋಲೀಸರು ವಿದ್ಯುತ್ ಕಳವು ಆರೋಪದಡಿ ಎಫ್ಐಆರ್ ದಾಖಲಿಸಿದ್ದಾರೆ. ನೇರ ಕಂಬದಿಂದ ವಿದ್ಯುತ್ ಸಂಪರ್ಕ ಪಡೆಯುವುದು ಅಪರಾಧ. 2003ರ ವಿದ್ಯುತ್ ಕಾಯ್ದೆಯ 135ನೇ ವಿಧಿಯಡಿ ಎಫ್‌ಐಆರ್ ದಾಖಲಾಗಿದೆ. ಬೆಸ್ಕಾಂ ಅಧಿಕಾರಿ ಒಬ್ಬರು ದೂರು ನೀಡಿದ್ದರು.

ದೀಪಾವಳಿ ಬೆಳಕು ಬೀರಲು ಕಾಸಗಿ ವ್ಯಕ್ತಿಗೆ ವಹಿಸಿದ್ದೆ. ಆತ ನೇರ ಕಂಬದಿಂದ ಸಂಪರ್ಕ ಪಡೆದಿದ್ದ ಎಂಬುದು ನನ್ನ ಗಮನಕ್ಕೆ ಬಂದಿರಲಿಲ್ಲ ಎಂದು ಕುಮಾರಸ್ವಾಮಿ ಸಮಜಾಯಿಸಿ ತಿಳಿಸಿದ್ದಾರೆ.