ಮಂಗಳೂರು: ನಮ್ಮ ಕುಡ್ಲ ವಾಹಿನಿ ವತಿಯಿಂದ ಆಯೋಜಿಸಲಾದ ನಮ್ಮ ಕುಡ್ಲ ಗೂಡು ದೀಪ ಸ್ಪರ್ಧೆ 2023 ಹಾಗೂ ನಮ್ಮ ಕುಡ್ಲ ಪ್ರಶಸ್ತಿ ಪ್ರದಾನ ಸಮಾರಂಭ ನ.11ರಂದು ಶನಿವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅದ್ದೂರಿಯಾಗಿ ನಡೆಯಿತು. ಸ್ಮಾರ್ಟ್ ಸಿಟಿ ಮಂಗಳೂರಿಗೆ ತಮ್ಮ ವಿನೂತನ ವಿನ್ಯಾಸದ ಕಟ್ಟಡಗಳ ಕೊಡುಗೆಗಳೊಂದಿಗೆ ಇನ್ನಷ್ಟು ಮೆರುಗು ನೀಡಿದ ರೋಹನ್ ಕಾರ್ಪೊರೇಷನ್ ಸಂಸ್ಥೆ ಮಾಲಕ ರೋಹನ್ ಮೊಂತೆರೊ ಅವರಿಗೆ ನಮ್ಮಕುಡ್ಲ ಪ್ರಶಸ್ತಿ, ಕಂಬಳ ಕ್ಷೇತ್ರದ ಸಾಧಕ, ತೀರ್ಪುಗಾರ ಗುಣಪಾಲ ಕಡoಬ ಅವರಿಗೆ ನಮ್ಮ ತುಳುವೆರ್ ಪ್ರಶಸ್ತಿ, ಕಂಕನಾಡಿ ಗರೋಡಿ ಬಿಲ್ಲವ ಸೇವಾ ಸಮಾಜ ಸಂಘಟನೆಗೆ ನಮ್ಮಕುಡ್ಲ ಸ್ಥಾಪಕ ಬಿಪಿ ಕರ್ಕೇರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ, ನಮ್ಮಕುಡ್ಲ ವಾಹಿನಿಯಲ್ಲಿ ಪ್ರಸಾರವಾಗಿ ಅತ್ಯಂತ ಜನಪ್ರಿಯವಾಗಿರುವ ಯಕ್ಷ ತೆಲಿಕೆ ಕಾರ್ಯಕ್ರಮದ ದಿನೇಶ್ ಕೋಡಪದವು ಅವರಿಗೆ ಸನ್ಮಾನದ ಗೌರವಾರ್ಪಣೆ ನಡೆಯಿತು. ಇನ್ನು ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ಹೀಗೆ 3 ವಿಭಾಗಳಲ್ಲಿ ಸ್ಪರ್ಧೆ ನಡೆದಿದ್ದು, ಸಾಂಪ್ರದಾಯಿಕ ವಿಭಾಗದಲ್ಲಿ ಆದಿತ್ಯ ಗುರುಪುರ ಪ್ರಥಮ ಬಹುಮಾನ ಚಿನ್ನದ ಪದಕ,ರಕ್ಷಿತ್ ಕುಮಾರ್ ಕೋಟೆಕಣಿ 2 ನೇ ಬಹುಮಾನ ಚಿನ್ನದ ಪದಕ, ಮುಕೇಶ್ ಕಾವೂರು, ಅಂಕಿತ, ಅನ್ವಿತಾ ಶೆಟ್ಟಿ ಕಾವೂರು, ಹಾಗೂ ಧನಂಜಯ ಪೂಜಾರಿ ಕೃಷ್ಣಾಪುರ 3 ನೇ ಬಹುಮಾನ ಬೆಳ್ಳಿಯ ಪದಕ ವಿಜೇತರಾದರು.

ಆಧುನಿಕ ವಿಭಾಕದಲ್ಲಿ ವಿಠಲ ಭಟ್ ಕಾರ್ ಸ್ಟ್ರೀಟ್ ಒಂದನೇ ಬಹುಮಾನದ ಪದಕ, ಜಗದೀಶ್ ಅಮೀನ್ ಸುಂಕದಕಟ್ಟೆ 2 ನೇ ಬಹುಮಾನ ಚಿನ್ನದ ಪದಕ, ರಾಜೇಶ್ ಚಿಲಿಂಬಿ, ಪ್ರೀತೇಶ್ ನಂತೂರು ಹಾಗೂ ಗಣೇಶ್ ಕುಮಾರ್ ಪಚ್ಚನಾಡಿ 3 ನೇ ಬಹುಮಾನ ಬೆಳ್ಳಿಯ ಪದಕ ವಿಜೇತರಾದರು..

ಪ್ರತಿಕೃತಿ ವಿಭಾಗದಲ್ಲಿ ಮಂಗಳೂರು ಆರ್ಟ್ಸ್ ಪಾಯಿಂಟ್ ಪ್ರಥಮ ಬಹುಮಾನ ಚಿನ್ನದ ಪದಕ, ಜಯರಾಮ್ ನಿಶ್ಮಿತಾ ಬಂಟ್ವಾಳ 2 ನೇ ಬಹುಮಾನ ಚಿನ್ನದ ಪದಕ, ಫ್ರೆಂಡ್ಸ್ ಹೊಸಬೆಟ್ಟು, ನವಚೇತನ ಗೇಮ್ಸ್ ಟೀಮ್ ಬಿಕರ್ಣಕಟ್ಟೆ ಹಾಗೂ ಸುಚೇoದ್ರ ಇರಾ 3 ನೇ ಬಹುಮಾನ ಬೆಳ್ಳಿಯ ಪದಕ ವಿಜೇತರಾದರು. ಅದರ ಒಟ್ಟಿಗೆ 3 ವಿಭಾಗಗಳೂ ಕೂಡ ಬೇರೆ ಬೇರೆ ಪ್ರಾಯೋಜಕರ ಕೊಡುಗೆಗಳನ್ನು ತೆಗೆದುಕೊಂಡರು.

ಪ್ರೋತ್ಸಾಹಕ, ವಿಶೇಷ ಪ್ರೋತ್ಸಾಹಕ ಹೀಗೆ ಒಟ್ಟು 95 ಬಹುಮಾನಗಳನ್ನು ವಿತರಿಸಿದರು. ಮಾಜಿ ಕೇಂದ್ರ ಮಂತ್ರಿ ಬಿ ಜನಾರ್ದನ ಪೂಜಾರಿಯವರ ಮಗೆ ಸಂತೋಷ್ ಜೆ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ. ರಮಾನಾಥ ರೈ, ನಮ್ಮ ತುಳುವೆರ್ ಪ್ರಶಸ್ತಿ ಸ್ವೀಕರಿಸಿದ ಗುಣಪಾಲ ಕಡoಬ, ನಮ್ಮಕುಡ್ಲ ಪ್ರಶಸ್ತಿ ಸ್ವೀಕರಿಸಿದ ರೋಹನ್ ಮೊಂತೆರೊ, BP ಕರ್ಕೇರ ಪ್ರಶಸ್ತಿ ಸ್ವೀಕರಿಸಿದ ಕಂಕನಾಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ದಿನೇಶ್ ಅಂಚನ್, ಗೌರವ ಪ್ರಶಸ್ತಿ ಸ್ವೀಕರಿಸಿದ ದಿನೇಶ್ ಕೋಡಪದವು ಹಾಗೂ ಸೂರ್ಯಕಾoತ್ ಜೆ ಸುವರ್ಣ, KMF ಮಂಗಳೂರು ಅಧ್ಯಕ್ಷ ಸುಚರಿತ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ ಹರಿಕೃಷ್ಣ ಪುನರೂರು, ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿ ಕಾರ್ಯದರ್ಶಿ ಆರ್. ಪದ್ಮರಾಜ್ ಉದ್ಯಮಿ ಪ್ರಶಾಂತ್ ಶೇಟ್ ಬೊಕ್ಕ ರಾಜೇಶ್ ಎಂ, ಕೋಟ್ಯಾನ್ ಅತಿಥಿಗಳಾಗಿ ಭಾಗವಹಿಸಿದ್ರು ನಮ್ಮಕುಡ್ಲ ಚಾನಲ್ ನಿರ್ದೇಶಕರುಗಳಾದ ಕರ್ಕೇರ ಸಹೋದರರು ಈ ಸಂದರ್ಭದಲ್ಲಿದ್ದರು... ನಮ್ಮಕುಡ್ಲದ ಕದ್ರಿ ನವನೀತ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಪ್ರೊ. MS ಕೋಟ್ಯಾನ್ ಹಾಗೂ ದಯಾನಂದ ಕಟೀಲ್ ಕಾರ್ಯಕ್ರಮ ನಿರ್ವಹಿಸಿದರು.