ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಸ್ಥಳೀಯ ಮಹಾವೀರ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಸಪ್ಟಂಬರ್ 27ರಂದು ನಡೆಯಿತು. ಉದ್ಘಾಟಕರಾಗಿ ಆಗಮಿಸಿದ್ದ ದ.ಕ. ಜಿಲ್ಲಾ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಅವರು ಮಾತನಾಡಿ ಕಾಲೇಜು ಜೀವನ ಬಹಳ ಸುಖಕರವಾಗಿರುತ್ತದೆ ಆದರೆ ಭವಿಷ್ಯವನ್ನು ರೂಪಿಸುವುದಕ್ಕೆ ಸಹಕಾರಿಯಾಗಿದೆ. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳು ಡ್ರಗ್ಸ್, ಮೊಬೈಲ್, ಬೈಕ್ ಇತ್ಯಾದಿಗಳಿಂದ ಜಾಗರೂಕರಾಗಿದ್ದು ಅಗತ್ಯವಿದ್ದಲ್ಲಿ ಮಾತ್ರ ಮೊಬೈಲ್ ಮತ್ತು ಬೈಕುಗಳನ್ನು ಉಪಯೋಗಿಸ ಬಹುದಾಗಿದೆ ಎಂದು ತಿಳಿ ಹೇಳಿದರು. ಡ್ರಗ್ಸ್ ನಿಂದ ಸದಾ ಕಾಲಕ್ಕೂ ಎಲ್ಲರೂ ದೂರ ಇರಬೇಕು ಎಂದು ಹಲವಾರು ಉದಾಹರಣೆಗಳೊಂದಿಗೆ ಅದರ ಬಾಧಕಗಳನ್ನು ತಿಳಿಯಪಡಿಸಿದ್ದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಆಳ್ವ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗೆ ಬಹಳ ಮೊದಲಿನಿಂದಲೇ ತಯಾರಿ ನಡೆಸಿದಲ್ಲಿ ಯಶಸ್ಸು ಶತಸಿದ್ಧ ಎಂದು ಶುಭ ಹಾರೈಸಿದರು. ಕೋಶಾಧಿಕಾರಿ ರಾಮ್ ಪ್ರಸಾದ್ ಭಟ್, ಕೆಆರ್ ಪಂಡಿತ್, ರಾಮನಾಥ ಭಟ್, ಪ್ರೇಮ ಚಂದ್ರಶೆಟ್ಟಿ, ರಮೇಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸಿಬ್ಬಂದಿ ಮಹಾಬಲರನ್ನು ಸನ್ಮಾನಿಸಲಾಯಿತು. 

ಕಚೇರಿ ಅಧಿಕ ರಾಜೇಶ್ ಕುಮಾರ್ ಪರಿಚಯಿಸಿದರು. ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕ್ಷೇಮ ಪಾಲನಾ ಅಧಿಕಾರಿ ಹರೀಶ್ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿ ನಾಯಕಿ ಶ್ರುತಿಭೇರಿ, ಡಾ. ಪ್ರವೀಣ್ ಸಾಧಕರ ವಿವರ ನೀಡಿದರು. ಉಪಾಧ್ಯಕ್ಷ ಕೌಶಿಕ್ ಟಿ ಪೂಜಾರಿ, ಕಾರ್ಯದರ್ಶಿ ದೀಪಶ್ರೀ, ಜತೆ ಕಾರ್ಯದರ್ಶಿ ಪೂಜಾ ಆಚಾರ್ಯ, ಪ್ರಜ್ವಲ್ ಶೆಟ್ಟಿಗಾರ ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ರೋಹಿಷ್ಟ ಪಿಂಟು ಸ್ವಾಗತಿಸಿದರು. ಸ್ಯಾಮ್ಯುಯೆಲ್ ಜೆ ಸೆರಾವೋ ಕಾರ್ಯಕ್ರಮ ನಿರೂಪಿಸಿದರು. ಗೌರಿ ಕಾರ್ಯಕ್ರಮ ಸಂಯೋಜಿಸಿದರು. ಶೃತಿ ವಂದಿಸಿದರು.