ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ದ.ಕ. ಜಿಲ್ಲೆಯ ಕಾಶಿ, ಪುತ್ತಿಗೆಯಲ್ಲಿ ಜನರ ತಪಸ್ಸು, ಪ್ರಾರ್ಥನೆಯ ಫಲದಿಂದ ಸುಂದರ, ಆಪ್ತ ಸಂಬಂಧ ಸಮರ್ಪಣಾ ಭಾವದಿಂದ ಮೂಡಿಬಂದಿದೆ. ಇಲ್ಲಿನ ಜ್ಞಾನ ನೀಡುವ ಬ್ರಾಹ್ಮಣರು ಉತ್ತಮ ಪರಂಪರೆಯನ್ನು ಹುಟ್ಟು ಹಾಕಿದ್ದಾರೆ.
ಅಕಾರ, ಮಕಾರ, ಉಕಾರ ಕಲೆಗಳನ್ನು ತಪದಿಂದ, ಮಂತ್ರ ತಂತ್ರಗಳಿಂದ ಆವಾಹಿಸಿಕೊಂಡು ಪೀಠ, ಮೂರ್ತಿ ಗಟ್ಟಿಗೊಳಿಸಿದ್ದಾರೆ ಎಂದು ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನುಡಿದರು. ಅವರು ಮಾರ್ಚ್ 3 ರಂದು ಪುತ್ತಿಗೆ ದೇವಾಲಯದ ತಿರುಮಲರಾಯ ಚೌಟ ವೇದಿಕೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಶಿವ ನಾ ಬಂದೆ ನೀ ತಂದೆ ಎನ್ನುವಂತೆ ಭವ ಸಾಗರವನ್ನು ದಾಟಿಸುವ. ಕಷ್ಟವನ್ನು ಇಷ್ಟದಿಂದ ಪೂರೈಸಿದಂತೆ ಜನರ ರೂಪದಲ್ಲಿ ಶಿವ ಪಾರ್ವತಿಯರು ಇಲ್ಲಿ ಕುಣಿಯುತ್ತಿದ್ದಾರೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೊಗಳಿದರು.
ಪುತ್ ಹೆಸರಿನಂತೆ ನೂತನ ವಿಶಿಷ್ಟ ಕ್ಷೇತ್ರದ ಪುತ್ತಿಗೆಯ ಮೂರನೇ ತಿರುಮಲರಾಯ ಚೌಟ, ಅಬ್ಬಕ್ಕರಂತೆ ಸದಾ ಸ್ಮರಣೀಯ ಎಂದು ಧಾರ್ಮಿಕ ಉಪನ್ಯಾಸದಲ್ಲಿ ಪುಂಡಿಕಾಯಿ ಗಣಪಯ್ಯ ಭಟ್ ವಿವರಿಸಿದರು. ದ.ಕ. ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ್ ಎಂ ಮಾತನಾಡಿ ಪ್ರೀತಿ, ಆತ್ಮವಿಶ್ವಾಸದ ಭಕ್ತ ಕರಸೇವಕರಿಂದ ಸುಮಾರು 3 ಕೋಟಿಗೂ ಹೆಚ್ಚು ಉಳಿತಾಯ ವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸುರೇಂದ್ರ ಕುಮಾರ್, ಅರಮನೆಯ ವೀರೇಂದ್ರ ಎಂ, ಜಗದೀಶ್ ಅಧಿಕಾರಿ, ತಹಸಿಲ್ದಾರ್ ಪ್ರದೀಪ್ ಹುರ್ಡೇಕರ್, ಎಂಸಿಎಸ್ ನ ಬಾಹುಬಲಿ ಪ್ರಸಾದ್, ಅರ್ಕುಳಬೀಡು ವಜ್ರನಾಭ ಶೆಟ್ಟಿ, ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ, ಹಡಿಂಜೆಗುತ್ತು ಜಗನ್ನಾಥ ಶೆಟ್ಟಿ, ಕೊಡ್ಯಡ್ಕ ವೈಭವ ಹೆಗ್ಡೆ, ಕುಂಗೂರು ರಾಮಮೂರ್ತಿ ಉಡುಪ, ಹಾಜರಿದ್ದರು.