ಮೂಡುಬಿದಿರೆ: ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ತಮಿಳು ನಾಡು ಅರಹಂತ ಗಿರಿ ಜೈನ ಕ್ಷೇತ್ರ ತಿರುಮಲೆಗೆ ದಿನಾಂಕ 28.4.23ರಿಂದ ಎರಡು ದಿನಗಳ ಧಾರ್ಮಿಕ ಪ್ರವಾಸ ಕೈಗೊಂಡು ತಿರುಮಲೆ ಪಂಚಕಲ್ಯಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಾದ ನೀಡಿದರು. 28.4.23ರಿಂದ ತಿರುಮಲೆ ಪೋಲೂರು ತಾಲೂಕು ತಿರುವಣ್ಣ ಮಲೈ ಜಿಲ್ಲೆ ತಮಿಳುನಾಡುವಿನಲ್ಲಿ ಭಗವಾನ್ ನೇಮಿನಾಥ್ ಸ್ವಾಮಿ ಗೆ 3.5.23ರ ವರೆಗೆ ಪಂಚ ಕಲ್ಯಾಣ 1256 ವಿವಿಧ ಬಿಂಬಗಳ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗುತ್ತಿದೆ.
ಮೂಡುಬಿದಿರೆ ಸ್ವಾಮೀಜಿ ಧಾರ್ಮಿಕ ಸಭೆಯಲ್ಲಿ ಉಪಸ್ಥಿತಿ ನೀಡಿ ಧರ್ಮದಿಂದ ಆತ್ಮ ಸಂಸ್ಕಾರ ಆತ್ಮ ವಿಕಾಸ ಹಾಗೂ ಅಧ್ಯಾತ್ಮ ಧರ್ಮ ಲಾಭ ಸಿಗುದು ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಬೆಳಗೊಳ ಸ್ವಾಮೀಜಿಗಳಿಂದ ದೀಕ್ಷಿತಗೊಂಡ ಧವಲಕೀರ್ತಿ ಭಟ್ಟಾರಕ ಸ್ವಾಮೀಜಿ ದೀಕ್ಷಾ ರಜತ ಸಂಭ್ರಮ ಆಚರಿಸುತ್ತಿದ್ದು ಈ ಭಾಗದಲ್ಲಿ 2300ಕ್ಕೂ ಪುರಾತನ ಪಾವನ ಕ್ಷೇತ್ರ ವಿಶಾಖಾ ಆಚಾರ್ಯ, ಕುಂದ ಕುಂದರ ತಪೋ ಭೂಮಿಯ ಜೀರ್ಣೋದ್ದಾರ ಗೊಳಿಸಿ ಶ್ರೀ ಅಕಲoಕ ಗುರುಕುಲ ಸ್ಥಾಪಿಸಿ ಶೆಕ್ಷಣಿಕ, ಸಾಮಾಜಿಕ ಸೇವೆ ಸಲ್ಲಿಸಿ ಸಮಾಜದ ಬಹು ದೊಡ್ಡ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿ 24ವರ್ಷ ಹಿಂದೆ ತಾವು ಜತೆಗಿದ್ದು ಧಾರ್ಮಿಕ ಪೂಜೆ ಸ್ವಾಧ್ಯಯದಲ್ಲಿ ಕಳೆದ ದಿನಗಳನ್ನು ನೆನಪಿಸಿ ಮೂಡುಬಿದಿರೆ ಕ್ಷೇತ್ರದ ವತಿಯಿಂದ ಶಾಲು ಹಾರ ಸ್ಮರಣಿಕೆ ನೀಡಿ ವಿನಾಯಾoಜಲಿ ಸಲ್ಲಿಸಿದರು. ಈ ಸಂಧರ್ಭ ಅಳದಂಗಡಿ ಅಜಿಲ ವಂಶಸ್ಥ ಡಾ ಪದ್ಮ ಪ್ರಸಾದ್ ಅಜಿಲರು ಮಧುರ ಅಜಿಲ ವೇಣೂರು ಬಾಹುಬಲಿ ಕ್ಷೇತ್ರ ದ ಪ್ರದಾನ ಕಾರ್ಯದರ್ಶಿ ಪ್ರವೀಣ್ ಉಪಸ್ಥಿತ ಮುನಿಗಳ ಸಂಘ ಭಟ್ಟಾರಕರಿಗೆ ಶ್ರೀ ಫಲ ನೀಡಿ ಆಶೀರ್ವಾದ ಪಡೆದರು ಹಾಗೂ 108 ಅಮೋಘ ಕೀರ್ತಿ ಅಮರ ಕೀರ್ತಿ, ಯುಗಳ ಮುನಿಗಳನ್ನು ವೇಣೂರು ಮಹಾ ಮಸ್ತ ಕಾಭಿಷೇಕಕ್ಕೆ ಅಹ್ವಾನ ಮಾಡಿದರು. 108 ಸುವಿಧಿ ಸಾಗರ್,108 ಗುಲಾಬ್ ಸಾಗರ್ ಮುನಿಗಳು ಉಪಸ್ಥಿತರಿದ್ದು ಹರಸಿ ಆಶೀರ್ವಾದ ಮಾಡಿದರು. ಎಂ ಕೆ ಜೈನ್, ವಿನೋದ್ ಬಾಕ್ಲಿ ವಾಲ್ ನಿಹಾಲ್ ಜೈನ್,ಸುಕೀರ್ತಿ ಅಜ್ರಿ ಚೆನೈ,ತ್ರಿಲೋಕ್ಯ ಜೈನ್, ಸಿಗಮಣಿ, ಪ್ರೇಮ್ ಕುಮಾರ, ವಜ್ರ ಕುಮಾರ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಮೂಡುಬಿದಿರೆ ಸ್ವಾಮೀಜಿ ಚೆನ್ನೈ ಬಳಿಯ ಪೊನ್ನೂರು ಮಲೆ, ಕ್ಷೇತ್ರ ಮಹಾ ಆಚಾರ್ಯ 108 ಕುಂದ ಕುಂದರ ತಪೋ ಭೂಮಿ ದರ್ಶನ ಮಾಡಿದರು. ಎರಡೂ ಕ್ಷೇತ್ರಗಳಲ್ಲಿ ದರ್ಶನ ಸಂಧರ್ಭ ತುಂತುರು ಮಳೆ ಸುರಿದದ್ದು ವಿಶೇಷ ವಾಗಿತ್ತು ಸುತ್ತಲಿನ ವಾತಾವರಣ ತಂಪಾಗಿಸಿತ್ತು.