ಮೂಡುಬಿದಿರೆ, ಜೂ. 8: ಜವನರ್ ಬೆದ್ರ ಫೌಂಡೇಶನ್ (ರಿ.) ಮೂಡುಬಿದಿರೆ ಇದರ ಆಶ್ರಯದಲ್ಲಿ ಜಿಲ್ಲಾ ಸರಕಾರಿ ವೆಸ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಮಹಾರಕ್ತದಾನ ಶಿಬಿರವು ಜೂ. 8ರಂದು ಇಲ್ಲಿನ ಸಮಾಜಮಂದಿರ ಸಭಾಭವನದಲ್ಲಿ ಜರಗಿತು.

ಸಮಾಜಮಂದಿರ ಸಭಾದ ಹಿರಿಯ ಸದಸ್ಯ ನ್ಯಾಯವಾದಿ ಕೆ. ಆರ್. ಪಂಡಿತ್ ಶಿಬಿರವನ್ನು ಉದ್ಘಾಟಿಸಿ ರಕ್ತದಾನ ದಾನಗಳಲ್ಲಿ ಅತ್ಯಂತ ಶ್ರೇಷ್ಠ ದಾನ. ಜೀವವನ್ನು ಉಳಿಸುವ ಅತ್ಯಂತ ಪವಿತ್ರ ಕಾರ್ಯ ದಾನಿಗಳಿಂದ ನಡೆಯುತ್ತಿದೆ. ಅಂತಹ ಎಲ್ಲರನ್ನೂ ಸೇರಿಸಿ ಮಾಡುವ ಈ ಮಹಾ ಕಾರ್ಯ ಭಗವಂತನ ಸೇವೆ ಎಂದು ಜವನೆರ್ ಬೆದ್ರದ ಎಲ್ಲರನ್ನೂ ಅಭಿನಂದಿಸಿದರು. ಎವರ್ ಕೇರ್ ಕ್ಲಿನಿಕ್ ನ ವೈದ್ಯ ಡಾ. ನಾರಾಯಣ ಪೈ ಬಿ., ನಿವೃತ್ತ ಸುಬೇದಾರ್ ಮೇಜರ್ ರಾಜೇಂದ್ರ ಜಿ., ಜಿಲ್ಲಾ ವೆನ್ಹಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತ ಪೂರಣ ಕೇಂದ್ರದ ಉತ್ಕರ್ಷ್ ಮತ್ತು ಆ್ಯಂಟನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜವನೆರ್ ಬೆದ್ರ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷ ಅಮರ್ ಕೋಟೆ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಂಸ್ಥೆಯ ರಕ್ತನಿಧಳು ಕಳೆದ 7 ವರ್ಷಗಳಿಂದ ಜಿಲ್ಲೆಯ ಹಾಗೂ ಹೊರ ಜಿಲ್ಲೆಯಲಿ ತುರ್ತು ರಕ್ತದ ಅವಶ್ಯಕತೆ ಸಂದರ್ಭದಲ್ಲಿ ರಕ್ತದಾನಿಗಳ ಸಹಕಾರದಿಂದ 10,000ಕ್ಕಿಂತಲೂ ಅಧಿಕ ಯೂನಿಟ್ ರಕ್ತವನ್ನು ಪೂರೈಸಿದೆ ಎಂದರು.



ಇಂದು ನಡೆದ ರಕ್ತದಾನದಲ್ಲಿ 116 ಮಂದಿ ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ಹಾಗೂ ಅತಿಥಿಗಳಿಗೆ 150 ಕ್ಕೂ ಹೆಚ್ಚು ಗಿಡಗಳನ್ನು ನೀಡಿ ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ಜವನರ್ ಬೆದ್ರ ರಕ್ತ ನಿಧಿ ಯ ಸಂಚಾಲಕ ಮನು ಒಂಟಿ ಕಟ್ಟೆ ಹಾಜರಿದ್ದರು.
ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ನಿರೂಪಿಸಿದ ಕಾರ್ಯಕ್ರಮದಲ್ಲಿ ನಾರಾಯಣ ಪಡುಮಲೆ ವಂದಿಸಿದರು.