ಮಂಗಳೂರು: ಸಂತೋಷವನ್ನು ಅರಸುತ್ತಾ ಅದನ್ನು ಇನ್ನಷ್ಟು ಹೆಚ್ಚಿಸಲು ತಂಬಾಕು ಸೇವನೆಯ ವಿವಿಧ ಪ್ರಕಾರಗಳನ್ನು ಬಳಸುವ ಕಾರಣದಿಂದ ಮೆದುಳಿನಲ್ಲಾಗುವ ವ್ಯತಿರಿಕ್ತ ಕಾರ್ಯಗಳು ಮಾನವನ ಅಧಪತನಕ್ಕೆ ಕಾರಣವಾಗುತ್ತದೆ. ಮೆದುಳಿನಲ್ಲಿ ಹೆಚ್ವುವ ಸೆರೋಟಿನಿನ್ ಡೋಪಮಿನ್ ನಂತಹ ಹಾರ್ಮೋನುಗಳು ತಂಬಾಕಿನಲ್ಲಿರುವ ನಿಕೋಟಿನ್ ನಿಂದ ಈ ರೀತಿಯ ಪರಿಸ್ಥಿತಿಗೆ ಕಾರಣವಾಗುತ್ತದೆ. ಮೊದಲು ಕುತೂಹಲಕ್ಕಾಗಿ ಆರಂಭವಾಗಿ ಅನಂತರ ಚಟವಾಗಿ ಬದಲಾಗುತ್ತದೆ. ಇದಕ್ಕೆ ಧೀ ಧೃತಿ ಸ್ಮೃತಿ ವಿಭ್ರಂಶ ಎನ್ನುತ್ತಾರೆ ಎನ್ನುತ್ತಾ ಮಂಗಳೂರು ಕಣಚೂರು ಮತ್ತು ಮಂಗಳಾ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಮೂಲವ್ಯಾಧಿ ಚರ್ಮರೋಗಗಳ ಕ್ಷಾರ ಚಿಕಿತ್ಸಾ ತಜ್ಞ ಮತ್ತು ಬರಹಗಾರ ಡಾ ಸುರೇಶ ನೆಗಳಗುಳಿಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃ ದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ ) ಮಂಗಳೂರು ಕೊಣಾಜೆ ವಲಯದ ಅಸೈಗೋಳಿ ಒಕ್ಕೂಟದಲ್ಲಿ ನಡೆದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಸಂಸ್ಥೆಯ ಮೇಲ್ವಿಚಾರಕರಾಗಿರುವ ಮಾಧವ ಅವರು ಹಲವಾರು ಯೋಜನೆಗಳು ಮತ್ತು ಅವುಗಳ ಬಳಕೆ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಸಭಾಧ್ಯಕ್ಷತೆ ವಹಿಸಿದ್ದ ಕೃಷ್ಣಪ್ಪ ಪೂಜಾರಿಯವರು ಸದಸ್ಯರಿಗೆ ಹಲವಾರು ಕಿವಿಮಾತುಗಳನ್ನೂ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸುವ ಅಗತ್ಯವನ್ನೂ ಒತ್ತಿ ಹೇಳಿದರು.

ಕಾರ್ಯಕ್ರಮ ಸಂಯೋಜನೆ ಮತ್ತು ನಿರೂಪಣೆ ಗೈದ ನೌಷಾದ್ ಕೊಣಾಜೆಯವರು ಮುಂದಿನ ಕಾರ್ಯಕ್ರಮಗಳ ಪಕ್ಷಿನೋಟ ಬೀರಿದರು.

ಪೂರ್ಣಿಮಾರವರ ಸ್ವಾಗತ ಮತ್ತು ಶಾಲೆಟ್ ಕೊಣಾಜೆಯವರ ಧನ್ಯವಾದದೊಡನೆ ಮುಕ್ತಾಯವಾದ ಸಭೆಯಲ್ಲಿ ಪದಾಧಿಕಾರಿಗಳಾದ ಗೀತಾ, ರಾಮಕೃಷ್ಣ, ತಾಹಿರಾ ಹಾಗೂ ಹಲವಾರು ಘಟಕಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಬಳಿಕ ರಾಷ್ಟ್ರಗೀತೆಯೊಡನೆ ಕಾರ್ಯಕ್ರಮ ಯಶಸ್ವಿಯಾಗಿ ಕೊನೆಗೊಂಡಿತು.