ಮೂಡುಬಿದಿರೆ, ವಿದ್ಯಾಗಿರಿ: ಮಣಿಪುರದಲ್ಲಿ ಸಂಘರ್ಷದಲ್ಲಿ ನೊಂದ ಕುಟುಂಬಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೆರವು ನೀಡಲಾಯಿತು. 

ಕಾಲೇಜಿನಲ್ಲಿ ನಡೆದ ಟ್ರೆಡಿಷನಲ್ ಡೇ ಸಂಧರ್ಭದಲ್ಲಿ  ಸಂಗ್ರಹಿಸಿದ ಸುಮಾರು 1 ಲಕ್ಷ  ರೂಪಾಯಿಯನ್ನು  ವಿವಿಧ ಪರಿಹಾರ ಶಿಬಿರಗಳಿಗೆ ಮತ್ತು ರಾಜ್ಯದ ಬಿಸ್ನುಪುರ್ ಜಿಲ್ಲೆ (ಮೊಯಿರಾಂಗ್ ನ್ಯಾಯವ್ಯಾಪ್ತಿಯಲ್ಲಿರುವ ಕುಂಬಿ ಪ್ರದೇಶ), ತೌಬಲ್ ಜಿಲ್ಲೆ ಮತ್ತು ಕಾಕ್ಚಿಂಗ್ ಜಿಲ್ಲೆಯ ಹಾಲಿ ಗ್ರಾಮಗಳಿಗೆ ವಿತರಿಸಲಾಯಿತು.

7 ಪರಿಹಾರ ಶಿಬಿರಗಳಿಗೆ ತಲಾ 10 ಸಾವಿರ ರೂಪಾಯಿ, 2 ಮುಂಚೂಣಿ ಗ್ರಾಮ ರಕ್ಷಣಾ ಸಂಸ್ಥೆಗೆ ತಲಾ 10 ಸಾವಿರ ರೂಪಾಯಿ ಮತ್ತು 3 ಸ್ಥಳಗಳಿಗೆ ಆಲೂಗಡ್ಡೆ, ಸಕ್ಕರೆ, ಅಡುಗೆ ಎಣ್ಣೆ, ಟೂತ್  ಬ್ರಷ್ , ಮಸೂರ, ನೀರಿನ ಬಾಟಲಿ ಇತ್ಯಾದಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. 

ಮಿಜಾರಿನ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ  ಜರುಗಿದ ಆಳ್ವಾಸ್ ಟ್ರೆಡಿಷನಲ್ ಡೇ ಸಂಧರ್ಭದಲ್ಲಿ ಹತ್ತಕ್ಕೂ ಅಧಿಕ ಆಹಾರ ಮಳಿಗೆಗಳನ್ನು ವಿದ್ಯಾರ್ಥಿಗಳು ತೆರೆದಿದ್ದರು.  ಆ ಸಂಧರ್ಭದಲ್ಲಿ  ವಿವಿಧ ಮಳಿಗೆಗಳಿಂದ ಗಳಿಸಿದ ಲಾಭವನ್ನು ಒಟ್ಟು ಗೂಡಿಸಿ ಮಣಿಪುರ ಸಂತ್ರಸ್ತರಿಗೆ ಸಹಾಯಧನದ ರೂಪದಲ್ಲಿ ನೀಡಲಾಗಿದೆ. 

ಕೋಟ್

ಉದಾತ್ತ ಸಹಾಯಕ್ಕಾಗಿ ಆಳ್ವಾಸ್ ಕಾಲೇಜು ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ನಾನು ಅಭಾರಿಯಾಗಿದ್ದೇನೆ - ಅಜಂತಾ ಮೊಯಿರಾಂಗ್ತೆಂ, ಮಣಿಪುರ

ತೆಂತಾ ಖೋಂಗ್ಬಾಲ್ ವೆಲ್ಫೇರ್ ಅಸೋಸಿಯೇಷನ್ ಯುವ ಸ್ವಯಂಸೇವಾ ಸಂಸ್ಥೆಯ ಸ್ವಯಂಸೇವಕರು ವಿತರಣೆ ಮಾತನಾಡಿದರು.