ಮಂಗಳೂರು, ಸೆ. 03: ಮುಸ್ಲಿಂ ಲೇಖಕರ ಸಂಘದ ವತಿಯಿಂದ ದಿವಂಗತ ಯು. ಟಿ. ಫರೀದ್ ಸ್ಮರಣಾರ್ಥ 2019ನೇ ಸಾಲಿನ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಬಹುಭಾಷಾ ಕವಿಗೋಷ್ಠಿಯು ಶಾಂತಿ ಪ್ರಕಾಶನದವರ ಸಭಾಂಗಣದಲ್ಲಿ ನಡೆಯಿತು.

ವೇದಿಕೆಯಲ್ಲಿ ಚಂದ್ರಕಲಾ ನಂದಾವರ, ಶಮೀಮಾ ಮತ್ತು ಜಹೀರ್ ಅಹ್ಮದ್

ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು. ಎಚ್. ಮತ್ತು ಬಿ. ಎ. ಮೊಹಮ್ಮದ್ ಅಲಿ

ಪ್ರಸ್ತಾವನೆ ಮತ್ತು ಸ್ವಾಗತ ಮಾಡಿದ ಎ. ಕೆ. ಕುಕ್ಕಿಲ

ಮರಣೋತ್ತರವಾಗಿ ಮರ್ಹೂಮ್ ಮುಮ್ತಾಜ್ ಬೇಗಂ ಅವರ ಸ್ವಾತಂತ್ರ್ಯದ ಕಹಳೆ ಪುಸ್ತಕವು ಪ್ರಶಸ್ತಿ ಪಡೆಯಿತು. ಮಮ್ತಾಜ್ ಬೇಗಂ ಅವರ ಮಗ ಜಹೀರ್ ಅಹ್ಮದ್ ಪ್ರಶಸ್ತಿಯನ್ನು ತಾಯಿಯ ಪರವಾಗಿ ಸ್ವೀಕರಿಸಿದರು.

ಖಾದರ್ ಅವರ ಅನುಪಸ್ಥಿತಿಯಲ್ಲಿ ಜಹೀರ್ ಅಹ್ಮದ್‌ರಿಗೆ ಉಮರ್ ಅವರಿಂದ ಪ್ರಶಸ್ತಿ ಪ್ರದಾನ

ದಿಕ್ಸೂಚಿ ಭಾಷಣ ಮಾಡಿದ ಚಂದ್ರಕಲಾ ನಂದಾವರ ಅವರು, ನಾನು ಕಾಲೇಜು ಓದುತ್ತಿದ್ದ ದಿನಗಳಲ್ಲಿ ಮುಸ್ಲಿಂ ಲೇಖಕಿ ಒಬ್ಬರು ಪತ್ರಿಕೆಗಳಲ್ಲಿ ಕತೆ ಬರೆಯುತ್ತಿದ್ದರೆಂದರೆ ಮುಮ್ತಾಜ್ ಬೇಗಂ. ಮುಮ್ತಾಜ್ ಬೇಗಂ ಅವರು ಸಮಾಜದ ಕಟ್ಟುಪಾಡು ಮೀರಿದ ವ್ಯಕ್ತಿತ್ವದವರು. ನನ್ನ ಪತಿ ವಾಮನ ನಂದಾವರ ಮತ್ತು ಮುಮ್ತಾಜ್ ಬೇಗಂ ಅವರು ಬಿಎಡ್ ಕಾಲದಲ್ಲಿ ಪೈಪೋಟಿಯಿಂದ ಕವನ ಬರೆಯುತ್ತಿದ್ದವರು. ಇಂದು ಬಿರುಕು ಬಿಟ್ಟಿರುವ ಸಮಾಜದ ನಡುವೆ ಸೌಹಾರ್ದದ ಸಮಾಜ ಕಟ್ಟಿದ ಮುಮ್ತಾಜ್ ಬೇಗಂ ಅವರನ್ನು ನೆನೆಯಬೇಕಾದ ಕಾಲವಿದು. ಅವರ ಪುಸ್ತಕ ಬದುಕಿದ್ದಾಗ ಆಯ್ಕೆಯಾಗಿದ್ದರೂ ಮರಣ ಹೊಂದಿದ ಮೇಲೆ ನೀಡಬೇಕಾಗಿರುವುದು ವಿಷಾದನೀಯ ಎಂದು ಚಂದ್ರಕಲಾ ನಂದಾವರ ಹೇಳಿದರು.

ಚಂದ್ರಕಲಾ ನಂದಾವರ ಅವರಿಂದ ದಿಕ್ಸೂಚಿ ಭಾಷಣ

ಮಹಮದ್ ಬಡ್ಡೂರ್ ಅವರಿಂದ ಕವಿಗೋಷ್ಠಿ ಉದ್ಘಾಟನೆ

ಕವಿಗೋಷ್ಠಿ

ಕವಿಗೋಷ್ಠಿ

ಅನಂತರ ನಡೆದ ಕವಿಗೋಷ್ಠಿಯನ್ನು ಬಹುಭಾಷಾ  ಕವಿ ಮಹಮ್ಮದ್ ಬಡ್ಡೂರು ಉದ್ಘಾಟನೆ ಮಾಡಿದರು. ಕವಿಗಳಾಗಿ ತುಳು ಪ್ರಶಾಂತಿ ಶೆಟ್ಟಿ ಇರುವೈಲು, ಕೊಂಕಣಿ ರೇಮಂಡ್ ಡಿ'ಕುನ್ಹಾ, ಕನ್ನಡ ಸಿಹಾನ ಬಿ. ಎಂ., ಉರ್ದು ಇಮ್ರಾನುಲ್ಲಾ ಖಾನ್ ಮನ್ಸೂರಿ ಕವನ ಮಂಡಿಸಿದರು.