ಮಂಗಳೂರು:  ಭಾಷೆಯು ಮನುಷ್ಯ ಸೃಷ್ಟಿ. ಸಾಹಿತ್ಯದ ಮೂಲಕ ಮಾನವೀಯ ಸಂಬಂಧಗಳನ್ನು ಬೆಸೆಯಲು ಸಾಧ್ಯವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ನಾಗಪ್ಪಗೌಡ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಹಮ್ಮಿಕೊಳ್ಳಾಗಿದ್ದ ಬ್ಯಾರಿ ಭಾಷೆ  ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ಭಾಷೆಯನ್ನುಇತರರಿಗೆ ಕಲಿಸುವ ಪ್ರಯತ್ನ ಮಾಡಬೇಕು. ಭಾಷೆಗೆ ಯಾವುದೇ ಜಾತಿ, ಧರ್ಮ ಬೇಧವಿಲ್ಲ. ಪ್ರಾಚೀನ ಕಾಲದಿಂದಲೂ ಅಸ್ಥಿತ್ವದಲ್ಲಿದ್ದು, ಇಂದಿಗೂ ಪ್ರಚಲಿತವಿರುವ ಭಾಷೆಗಳಲ್ಲಿ ಬ್ಯಾರಿ ಭಾಷೆ ಕೂಡ ಒಂದಾಗಿದೆ. ಅಂದಿನ ಕಾಲದಲ್ಲಿ ಕರಾವಳಿಯನ್ನು ಮಿನಿ ಭಾರತ ಎಂದೇ ಗುರುತಿಸಲಾಗುತ್ತಿತ್ತು ಎಂದು ಬಣ್ಣಿಸಿದರು.

ಬ್ಯಾರಿ ಭಾಷೆಯ ಮಾಸಿಕ ಪತ್ರಿಕೆ ಉಪಸಂಪಾದಕ ಮುಹಮ್ಮದ್ ಅಲಿ ಕಮ್ಮರಡಿ, ಮೊದಲು ನಾವು ಭಾಷೆ ಕಲಿತು ಇತರರಿಗೂ ಕಲಿಸಬೇಕು. ಆ ಮೂಲಕ ಭಾಷೆಯನ್ನು ಜೀವಂತವಾಗಿಟ್ಟುಕೊಳ್ಳಲು ಸಾಧ್ಯ. ಎಲ್ಲಾ ಭಾಷೆಗಳಂತೆ ಬ್ಯಾರಿ ಭಾಷೆ ಕೂಡಕಲಿಯಲು ಸುಲಭ ಸಾಧ್ಯ. ಭಾಷೆ ಎಲ್ಲರ ಸ್ಪತ್ತಾಗಿದೆ. ಸಮಾಜದಲ್ಲಿ ಬದುಕ ಬೇಕಾದರೆ ಎಲ್ಲಾ ಭಾಷೆಯ ಜ್ಞಾನ ಇರಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಮನುಷ್ಯನ ನಡುವೆ ಬಾಂಧವ್ಯ ಬೆಳೆಸುವ ನಿಟ್ಟಿನಲ್ಲಿ ಬ್ಯಾರಿ ಪೀಠ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. 

ಪ್ರಾಸ್ಥಾವಿಕವಾಗಿ ಮಾತನಾಡಿದ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಪ್ರೊ. ಅಬೂಬಕ್ಕರ್ ಸಿದ್ಧಿಕ್, ಸಾಂಸ್ಕ್ರತಿಕ  ಶ್ರೀಮಂತಿಕೆಯಿಂದ ಕೂಡಿರುವ ಕರಾವಳಿಯಲ್ಲಿ ಉಗಮವಾಗಿರುವ ಬ್ಯಾರಿ ಭಾಷೆಗೆ 1,400 ವರ್ಷಗಳಷ್ಟು ಇತಿಹಾಸವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮ್ಮರ್‍ಯು. ಎಚ್., ವಕೀಲ ಬಿ. ಎ. ಮಹಮ್ಮದ್ ಹನೀಫ್, ಬದ್ರಿಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಇಸ್ಮಾಯಿಲ್‍ ಎನ್., ಎನ್ಎಂಪಿಟಿಯ ನಿವೃತ್ತ ಉಪನಿರ್ದೇಶಕ ಖಾಲಿದ್‍ ತಣ್ಣೀರುಬಾವಿ, ಬ್ಯಾರಿ ವಾರ್ತೆ ಪತ್ರಿಕೆ ಸಂಪಾದಕ ಬಶೀರ್ ಬೈಕಂಪಾಡಿ ಉಪಸ್ಥಿತರಿದ್ದರು.